ಚಾಂಪಿಯನ್ಸ್ ಲೀಗ್ ಟ್ವೆಂಟಿ20 ಪಂದ್ಯಗಳಿಗೆ ಸಜ್ಜಾಗುತ್ತಿರುವ ಸಚಿನ್

ಶನಿವಾರ, 31 ಆಗಸ್ಟ್ 2013 (18:23 IST)
PR
PR
ಮುಂಬೈ: ಭಾರತ ತಂಡದ ಹಿರಿಯ ಆಟಗಾರ ಸಚಿನ್ ತೆಂಡೂಲ್ಕರ್ ನೆಟ್ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಕೈಗುಂಟಾದ ಗಾಯಕ್ಕೆ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ಬಳಿಕ ಚಾಂಪಿಯನ್ಸ್ ಲೀಗ್ ಟ್ವೆಂಟಿ20 ಪಂದ್ಯಕ್ಕೆ ಎದುರುನೋಡುತ್ತಿದ್ದಾರೆ. ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಾವಳಿಯು ಸೆಪ್ಟೆಂಬರ್ 21ರಿಂದ ಅಕ್ಟೋಬರ್ 6ರವರೆಗೆ ವಿವಿಧ ನಗರಗಳಲ್ಲಿ ನಡೆಯಲಿದ್ದು, ಅರ್ಹತಾ ಸುತ್ತಿನ ಪಂದ್ಯಗಳು ಸೆಪ್ಟೆಂಬರ್ 17ರಿಂದ ನಡೆಯಲಿದೆ.40 ವರ್ಷ ವಯಸ್ಸಿನ ಬ್ಯಾಟ್ಸ್‌ಮನ್ ಏಕದಿನ ಪಂದ್ಯಗಳಿಂದ ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾಗಿದ್ದು, ಸನ್‌ರೈಸರ್ಸ್ ವಿರುದ್ಧ ಆಡುವಾಗ ಮೇ 13ರಂದು ಗಾಯಗೊಂಡಿದ್ದರು.

ಮುಂಬೈ ಇಂಡಿಯನ್ಸ್ ಪರ ಕೊನೆಯ ಐದು ಆಟಗಳನ್ನು ಕಳೆದುಕೊಂಡಿದ್ದರು. ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಲಿರುವ ತೆಂಡೂಲ್ಕರ್ ಈ ವರ್ಷದ ಕೊನೆಯಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು ಭೇಟಿ ಮಾಡಿದಾಗ ತಮ್ಮ ವೃತ್ತಿಜೀವನದ ಇನ್ನೊಂದು ಮೈಲಿಗಲ್ಲು ಮುಟ್ಟಲಿದ್ದಾರೆ. 200 ಟೆಸ್ಟ್‌ಪಂದ್ಯಗಳ ಗಡಿಯನ್ನು ಮುಟ್ಟಲು ಅವರಿಗೆ ಕೇವಲ ಎರಡು ಟೆಸ್ಟ್ ಪಂದ್ಯಗಳು ಮಾತ್ರ ಬಾಕಿ ಉಳಿದಿವೆ.

ವೆಬ್ದುನಿಯಾವನ್ನು ಓದಿ