ಚಾಲೆಂಜರ್ ಸಿರೀಸ್; ಕರ್ನಾಟಕದ ಐವರು ಆಟಗಾರರಿಗೆ ಅವಕಾಶ

ಬುಧವಾರ, 29 ಸೆಪ್ಟಂಬರ್ 2010 (11:51 IST)
ಮಧ್ಯಪ್ರದೇಶದ ಇಂಧೋರ್‌ನಲ್ಲಿ ನಡೆಯಲಿರುವ ಏರ್‌ಟೆಲ್ ಎನ್‌ಕೆಪಿ ಸಾಳ್ವೆ ಚಾಲೆಂಜರ್ ಸಿರೀಸ್ ಟೂರ್ನಮೆಂಟ್‌ನಲ್ಲಿ ಭಾಗವಹಿಸುವ ಎಲ್ಲಾ ಮೂರು ತಂಡಗಳಲ್ಲಾಗಿ ಕರ್ನಾಟಕದ ಐದು ಮಂದಿ ಆಟಗಾರರು ಸ್ಥಾನ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.

ಇಂಡಿಯಾ ರೆಡ್, ಇಂಡಿಯಾ ಬ್ಲೂ ಹಾಗೂ ಇಂಡಿಯಾ ಗ್ರೀನ್ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳಾಗಿವೆ. ರೆಡ್ ತಂಡದಲ್ಲಿ ಉದಯೋನ್ಮುಖ ಆಟಗಾರರಾದ ಮನೀಷ್ ಪಾಂಡೆ ಮತ್ತು ಆರ್. ವಿನಯ್ ಕುಮಾರ್ ಕಾಣಿಸಿಕೊಂಡಿದ್ದರೆ ಗಣೇಶ್ ಸತೀಶ್ ಬ್ಲೂ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅದೇ ರೀತಿ ಅನುಭವಿ ರಾಬಿನ್ ಉತ್ತಪ್ಪ ಮತ್ತು ಅಭಿಮನ್ಯು ಮಿಥುನ್ ಗ್ರೀನ್ ತಂಡದಲ್ಲಿದ್ದಾರೆ.

ಇಂಡಿಯಾ ಬ್ಲೂ ತಂಡವನ್ನು ಆಲ್‌ರೌಂಡರ್ ಯುವರಾಜ್ ಸಿಂಗ್ ಮುನ್ನೆಡೆಸಲಿದ್ದಾರೆ. ಹಾಗೆಯೇ ರೆಡ್ ತಂಡಕ್ಕೆ ದಿನೇಶ್ ಕಾರ್ತಿಕ್ ಹಾಗೂ ಗ್ರೀನ್ ತಂಡಕ್ಕೆ ಎಸ್. ಬದ್ರೀನಾಥ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಹಿನ್ನೆಲೆಯಲ್ಲಿ ಈ ಟೂರ್ನಿಯ ಎಲ್ಲಾ ಮೂರು ತಂಡದ ಆಟಗಾರರಿಗೂ ಮಹತ್ವದೆನಿಸಿಕೊಂಡಿದೆ.

ಎನ್‌ಕೆಪಿ ಸಾಳ್ವೆ ಚಾಲೆಂಜರ್ ಸಿರೀಸ್ ಟೂರ್ನಮೆಂಟ್ ಅಕ್ಟೋಬರ್ 8ರಿಂದ 11ರ ವರೆಗೆ ನಡೆಯಲಿದೆ. ಯುವರಾಜ್‌ರಂತೆ ತಮ್ಮ ಪುನರಾಗಮನವನ್ನು ಎದುರು ನೋಡುತ್ತಿರುವ ಪಠಾಣ್ ಬ್ರದರ್ಸ್ ಮತ್ತು ಆರ್. ಪಿ. ಸಿಂಗ್ ಅವರಿಗೂ ಈ ಟೂರ್ನಿ ಪ್ರಾಮುಖ್ಯವೆನಿಸಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ತಂಡ ಇಂತಿದೆ:

ಇಂಡಿಯಾ ಬ್ಲೂ: ಯುವರಾಜ್ ಸಿಂಗ್ (ನಾಯಕ), ಶಿಖರ್ ಧವನ್, ಶ್ರೀವಾಸ್ತವ್ ಗೋಸ್ವಾಮಿ, ಅಜಿಂಕ್ಯಾ ರಹಾನೆ, ಮನೋಜ್ ತಿವಾರಿ, ಇರ್ಫಾನ್ ಪಠಾಣ್, ಅಜೇಯ್ ಜಡೇಜಾ, ವೃದ್ಧೀಮಾನ್ ಸಹಾ, ಪಿಯೂಷ್ ಚಾವ್ಲಾ, ಉಮೇಶ್ ಯಾದವ್, ಆರ್. ಪಿ. ಸಿಂಗ್, ಯೋ ಮಹೇಶ್, ಗಣೇಶ್ ಸತೀಶ್ ಮತ್ತು ತನ್ಮಯ್ ಶ್ರೀವಾಸ್ತವಾ.

ಇಂಡಿಯಾ ರೆಡ್: ದಿನೇಶ್ ಕಾರ್ತಿಕ್ (ನಾಯಕ), ಅಭಿನವ್ ಮುಕುಂದ್, ಪಾರ್ಥಿವ್ ಪಾಟೇಲ್, ಮನೀಷ್ ಪಾಂಡೆ, ವಿರಾಟ್ ಕೊಹ್ಲಿ, ಸೌರಭ್ ತಿವಾರಿ, ಯೂಸುಫ್ ಪಠಾಣ್, ಇಕ್ಬಾಲ್ ಅಬ್ದುಲ್ಲಾ, ಆರ್. ವಿನಯ್ ಕುಮಾರ್, ಅಶೇಕ್ ದಿಂಡಾ, ಸುದೀಪ್ ತ್ಯಾಗಿ, ಮೊಹಸಿನ್ ಮಿಶ್ರಾ, ಅಬು ನಚಿಮ್ ಅಹ್ಮದ್ ಮತ್ತು ರಾಹುಲ್ ಶರ್ಮಾ

ಇಂಡಿಯಾ ಗ್ರೀನ್: ಎಸ್. ಬದ್ರೀನಾಥ್ (ನಾಯಕ), ನಮನ್ ಓಜಾ, ಶ್ರೀಕಾಂತ್ ಅನಿರುದ್ಧ, ರೋಹಿತ್ ಶರ್ಮಾ, ರಾಬಿನ್ ಉತ್ತಪ್ಪ, ಕೇದರ್ ಜಾದವ್, ಆರ್ ಅಶ್ವಿನ್, ಜಾಸ್ಕರಣ್ ಸಿಂಗ್, ಅಭಿಮನ್ಯು ಮಿಥುನ್, ಜಯದೇವ್ ಉನಾದ್ಕಾಟ್, ಸರಬ್‌ಜೀತ್ ಲಾಡಾ, ಟಿ ಸುಮನ್, ಧವಳ್ ಕುಲಕರ್ಣಿ ಮತ್ತು ಅಂಬಾಟಿ ರಾಯುಡು.

ವೆಬ್ದುನಿಯಾವನ್ನು ಓದಿ