ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಪಟ್ಟ ತ್ಯಜಿಸಲು ಧೋನಿ ಒಲವು

ಶನಿವಾರ, 29 ಮಾರ್ಚ್ 2014 (12:10 IST)
PR
PR
ಮುಂಬೈ: ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಪಟ್ಟಕ್ಕೆ ರಾಜೀನಾಮೆ ನೀಡುವ ಪ್ರಸ್ತಾಪ ಮಂಡಿಸಿದ್ದಾರೆ. ಐಪಿಎಲ್ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಹಗರಣದ ಹಿನ್ನೆಲೆಯಲ್ಲಿ ಧೋನಿ ರಾಜೀನಾಮೆ ನೀಡುವ ತೀರ್ಮಾನಕ್ಕೆ ಬಂದಿದ್ದಾರೆ. ಈ ಹಗರಣದೊಂದಿಗೆ ಅವರ ಹೆಸರು ತಳಕುಹಾಕಿಕೊಂಡಿದ್ದರಿಂದ ಅವರು ಸಿಟ್ಟಾಗಿದ್ದು, ಎನ್.ಶ್ರೀನಿವಾಸನ್ ಅವರಿಗೆ ತಾವು ನಾಯಕತ್ವ ತ್ಯಜಿಸುವ ಪ್ರಸ್ತಾಪ ಮಾಡಿದ್ದಾರೆ. ಆದರೆ ಶ್ರೀನಿವಾಸನ್ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ತಿಳಿದುಬಂದಿದೆ.

ಸುಪ್ರೀಕೋರ್ಟ್‌ನಲ್ಲಿ ಗುರುವಾರ ಐಪಿಎಲ್ ಹಗರಣದ ವಿಚಾರಣೆಯಲ್ಲಿ ಧೋನಿ ಹೆಸರನ್ನು ಪ್ರಸ್ತಾಪಿಸಲಾಯಿತು.ಅರ್ಜಿದಾರರ ಪರ ವಕೀಲ ಹರೀಶ್ ಸಾಳ್ವೆ ಧೋನಿ ತನಿಖಾ ಸಮಿತಿಯ ಮುಂದೆ ಸುಳ್ಳು ಹೇಳಿಕೆ ನೀಡಿದ್ದಾರೆಂದು ಆರೋಪಿಸಿದ್ದರು.ಗುರುನಾಥ್ ಮೇಯಪ್ಪನ್ ಕೇವಲ ಕ್ರಿಕೆಟ್ ಉತ್ಸಾಹಿ ಎಂದು ಧೋನಿ ಹೇಳಿಕೆ ನೀಡುವ ಮೂಲಕ ಸುಳ್ಳುಹೇಳಿದ್ದಾರೆ ಎಂದು ಅವರು ಆರೋಪಿಸಿದರು.

ಶುಕ್ರವಾರ ಬಿಸಿಸಿಐ ಹಿರಿಯ ವಕೀಲ ಧೋನಿಯನ್ನು ಸಮರ್ಥಿಸಿಕೊಂಡು ಮಾತನಾಡಿ, ಐಪಿಎಲ್ ತನಿಖಾ ಸಮಿತಿಯ ಮುಂದೆ ಧೋನಿ ಸುಳ್ಳು ಹೇಳಿಲ್ಲ ಎಂದು ವಾದಿಸಿದ್ದರು.ಹಿಂದೆ ಕೂಡ ಧೋನಿ ವಿರುದ್ಧ ಸಂಘರ್ಷ ಹಿತಾಸಕ್ತಿ ಆರೋಪ ಮಾಡಲಾಗಿತ್ತು. ಭಾರತದ ನಾಯಕ ಇಂಡಿಯನ್ ಸಿಮೆಂಟ್ಸ್ ಉದ್ಯೋಗಿಯಾಗಿದ್ದು, ಈ ಕಂಪೆನಿಯ ಮಾಲೀಕರು ಸಿಎಸ್‌ಕೆ ಫ್ರಾಂಚೈಸಿಯಾಗಿದ್ದಾರೆ. ಶ್ರೀನಿವಾಸನ್ ಈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು.

ವೆಬ್ದುನಿಯಾವನ್ನು ಓದಿ