ತಂಡದಲ್ಲಿ ಬೇಸರ ಮೂಡಿಸಿರುವ ಯುವಿ ವರ್ತನೆ

ಸೋಮವಾರ, 31 ಡಿಸೆಂಬರ್ 2007 (11:20 IST)
ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಯುವರಾಜ್ ಸಿಂಗ್ ರನ್ ಕಲೆಹಾಕುವಲ್ಲಿ ವಿಫಲರಾಗಿರಬಹುದು. ಕ್ರೀಡೆ ಎಂದ ಮೇಲೆ ಇದು ಸಾಮಾನ್ಯ ಸಂಗತಿ. ಸೋಲು ಗೆಲುವುಗಳು, ನೋವುಗಳು ಇದ್ದದ್ದೆ, ಆದರೆ ಟೀಮ್ ಇಂಡಿಯಾದ ಯುವರಾಜ್ ಸಿಂಗ್ ಅವರ ವರ್ತನೆಯಲ್ಲಿ ಬದಲಾಗಿದ್ದು, ಯುವರಾಜ್ ವರ್ತನೆ ತಂಡದಲ್ಲಿ ಬೇಸರ ತರಿಸುವ ವಾತಾವರಣ ನಿರ್ಮಿಸುತ್ತಿದೆ ಎಂದು ಸಹಾಯಕ ಕೋಚ್ ಲಾಲ್ ಚಂದ್ ರಜಪೂತ್ ಹೇಳಿದ್ದಾರೆ.


ಪಂದ್ಯದ ಸೋಲಿನ ನಂತರ ಯುವರಾಜ್ ಸಿಂಗ್ ವರ್ತನೆಯಲ್ಲಿ ಬದಲಾವಣೆಯಾಗಿದೆ. ಬದಲಾಗಿರುವ ವರ್ತನೆಗೆ ಕಾರಣ ತಿಳಿದುಕೊಳ್ಳಲು ಸಿಡ್ನಿಯಲ್ಲಿ ಯುವರಾಜ್ ಅವರೊಂದಿಗೆ ನೇರವಾಗಿ ಮಾತುಕತೆ ನಡೆಸಲಿದ್ದೆನೆ.

ಯುವರಾಜ್ ವರ್ತನೆ ತಂಡದ ಇತರ ಕ್ರಿಕೆಟಿಗರಲ್ಲಿ ಕೋಪ ತರಿಸಿದೆ. ಇದೇ ರೀತಿ ಅವರ ವರ್ತನೆ ಮುಂದುವರಿದಲ್ಲಿ ಯುವರಾಜ್ ಸ್ಥಾನಕ್ಕೆ ವಿರೇಂದ್ರ ಸೆಹವಾಗ್ ಇಲ್ಲವೆ ದಿನೇಶ್ ಕಾರ್ತಿಕ್ ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಕಾರ್ತಿಕ್ ಇಲ್ಲವೇ ಸೆಹವಾಗ್ ಕ್ರೀಸಿಗೆ ಬಂದಲ್ಲಿ ಇನ್ನಿಂಗ್ಸ್ ಆರಂಭಿಸುವ ಜವಾಬ್ದಾರಿ ನೀಡಿ ರಾಹುಲ್ ದ್ರಾವಿಡ್ ಅವರನ್ನು ಸ್ವಸ್ಥಾನಕ್ಕೆ ಮರಳಿಸುವ ಸಾಧ್ಯತೆ ಇದೆ.

ವೆಬ್ದುನಿಯಾವನ್ನು ಓದಿ