ತಮಿಳರ ವಿರುದ್ದ ಉತ್ತರ ಭಾರತೀಯರ ಕುತಂತ್ರ : ಎನ್‌.ಶ್ರೀನಿವಾಸನ್‌ ಆರೋಪ

ಸೋಮವಾರ, 10 ಜೂನ್ 2013 (15:18 IST)
PR
PR
ಐಪಿಎಲ್‌ನ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ತಮ್ಮ ಹಾಗೂ ಕುಟುಂಬದ ವಿರುದ್ಧದ ಆರೋಪಗಳ ಹಿಂದೆ ದಕ್ಷಿಣ ಭಾರತ ಮತ್ತು ತಮಿಳರ ವಿರುದ್ಧದ ಉತ್ತರ ಭಾರತೀಯರ ಲಾಬಿ ಕಾರಣ ಎಂದು ಎನ್‌. ಶ್ರೀನಿವಾಸನ್‌ ಗಂಭೀರ ಆರೋಪ ಮಾಡಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಶ್ರೀನಿವಾಸನ್‌ ಅವರನ್ನು ಕೆಳಗಿಳಿಸುವ ಒತ್ತಡದ ಹಿಂದೆ ಉತ್ತರ ಭಾರತೀಯರ ಲಾಬಿ ಕಾರಣ ಎಂಬ ಜನತಾಪಕ್ಷ ಮುಖ್ಯಸ್ಥ ಸುಬ್ರಹ್ಮಣ್ಯನ್‌ ಸ್ವಾಮಿ ಅವರ ಹೇಳಿಕೆಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಪ್ರತಿಕ್ರಿಯಿಸಿದರು.

ಇದರಲ್ಲಿ ಗೌಪ್ಯವಾಗಿಡುವ ವಿಷಯವೇನಿಲ್ಲ. ನನ್ನ ವಿರುದ್ಧ ದಕ್ಷಿಣ ಭಾರತೀಯರು ಅದರಲ್ಲೂ ತಮಿಳಿನ ವಿರೋಧಿ ಬಣ ಪಿತೂರಿ ಕಾರಣ ಎಂಬುದು ಸ್ಪಷ್ಟ ಎಂದು ಎಂಬುದು ಸ್ಪಷ್ಟ. ನನ್ನ ವಿರುದ್ಧ ಯಾವುದೇ ಆರೋಪಗಳಿಲ್ಲ. ಆದರೆ ಬಿಸಿಸಿಐನಲ್ಲೇ ಪಿತೂರಿ ನಡೆಯುತ್ತಿದೆ. ಕೆಲವರು ಸಂಸ್ಥೆಯ ಮುಖ್ಯಸ್ಥರ ಹುದ್ದೆಯನ್ನು ಆಕಾಂಕ್ಷಿಯಾಗಿದ್ದರು. ಆದರೆ ಅದು ವಿಫ‌ಲವಾಗಿದೆ ಎಂದು ಅವರು ಹೇಳಿದರು.

ಬಿಸಿಸಿಐ ಯಾವುದೇ ಬುಕ್ಕಿಗಳೊಂದಿಗೆ ಸಂಬಂಧ ಹೊಂದಿಲ್ಲ ಮತ್ತು ರಾಜಸ್ಥಾನ್‌ ರಾಯಲ್ಸ್‌ ತಂಡದ ಶ್ರೀಶಾಂತ್‌ ಬೆಟ್ಟಿಂಗ್‌ ಹಗರಣದಲ್ಲಿ ಸಿಲುಕಿರುವುದು ಆಶ್ಚರ್ಯ ತಂದಿದೆ ಎಂದಿದ್ದಾರೆ.

ಗುರುನಾಥ್‌ ವಿರುದ್ಧ ಇರುವ ಆರೋಪಗಳೆಲ್ಲ ಸುಳ್ಳು. ಇತರೆ ಯಾವುದೇ ದೇಶಗಳಿಗೆ ತೆರಳುವುದಿಲ್ಲ. ನನಗೆ ಆತನ ಮೇಲೆ ನಂಬಿಕೆ ಇದೆ. ಆತ ಇದರಿಂದ ಪಾರಾಗಿ ಬರಲಿದ್ದು ಆತನ ವಿರುದ್ಧದ ಆರೋಪಗಳೆಲ್ಲ ನಿರಾಧಾರ ಎಂದು ಅಳಿಯನನ್ನು ಶ್ರೀನಿವಾಸನ್‌ ಸಮರ್ಥಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ