ದಾದಾ ಕಮ್‌ಬ್ಯಾಕ್; ರಣಜಿಯಲ್ಲಿ ಆಡಲಿರುವ ಮಾಜಿ ನಾಯಕ

ಶುಕ್ರವಾರ, 28 ಅಕ್ಟೋಬರ್ 2011 (18:15 IST)
ಬಂಗಾಳ ರಣಜಿ ತಂಡದಲ್ಲಿ ಕಾಣಿಸಿಕೊಳ್ಳುವ ಮೂಲಕ ಬಂಗಾಳ ಹುಲಿ ಖ್ಯಾತಿಯ ಸೌರವ್ ಗಂಗೂಲಿ ಮತ್ತೆ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿಕೊಂಡಿದ್ದಾರೆ.

ಈ ಹಿಂದೆಯೇ ರಣಜಿ ಋತುವಿಗೆ ತಮ್ಮ ಲಭ್ಯತೆಯನ್ನು ಗಂಗೂಲಿ ಘೋಷಿಸಿದ್ದರು. ಇದರಂತೆ ಬಂಗಾಳ ಆಯ್ಕೆ ಸಮಿತಿಯು ಮಾಜಿ ನಾಯಕನ ಆಯ್ಕೆಯನ್ನು ಪರಿಗಣಿಸಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

PTI
ರಣಜಿ ಅವಧಿಯನ್ನು ಆಡಲು ಗಂಗೂಲಿ ಎಷ್ಟು ಉತ್ಸಾಹಿತರಾಗಿದ್ದಾರೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ. ರಣಜಿ ಟ್ರೋಫಿಗೆ ತಮ್ಮ ಲಭ್ಯತೆಯನ್ನು ಖಚಿತಪಡಿಸುವ ನಿಟ್ಟಿನಲ್ಲೇ ನಿರಂತರ ಅಂತರಾಳದಲ್ಲಿ ಅಭ್ಯಾಸವನ್ನು ನಡೆಸಿಕೊಂಡು ಬಂದಿದ್ದರು. ಅಷ್ಟೇ ಅಲ್ಲದೆ ಇದು ಯುವ ಕ್ರಿಕೆಟಿಗರಿಗೆ ಪ್ರೇರಣೆಯು ಆಗಿದೆ ಎಂದು ಬಂಗಾಳ ಆಯ್ಕೆ ಸಮಿತಿ ಮುಖ್ಯಸ್ಥ ದೀಪ್ ದಾಸ್‌ಗುಪ್ತಾ ತಿಳಿಸಿದ್ದಾರೆ.

ಹೀಗಿದ್ದರೂ ಟೆಲಿವಿಷನ್ ವೀಕ್ಷಣಾ ವಿವರಣೆಗಾರನಾಗಿಯೂ ಕೆಲಸ ಮಾಡುತ್ತಿರುವ ಗಂಗೂಲಿ ಡಿಸೆಂಬರ್‌ನಲ್ಲಿ ರಣಜಿ ಟ್ರೋಫಿಗೆ ಲಭ್ಯರಾಗುವುದು ಅನುಮಾನ. ಈ ಸಂದರ್ಭದಲ್ಲಿ ಭಾರತ ತಂಜವು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ಹಿನ್ನಲೆಯಲ್ಲಿ ವೀಕ್ಷಕಾ ವಿವರಣೆಗಾರನಾಗಿ ಗಂಗೂಲಿ ತಮ್ಮ ಸೇವೆ ಸಲ್ಲಿಸಲಿದ್ದಾರೆ.

2008 ನವೆಂಬರ್ ತಿಂಗಳಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಬಾಳ್ವೆಗೆ ದಾದಾ ನಿವೃತ್ತಿ ಘೋಷಿಸಿದ್ದರು. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಕ್ರಿಯರಾಗಿರುವ ಗಂಗೂಲಿ ತಮ್ಮ ಫಾರ್ಮ್ ಜತೆ ಫಿಟ್‌ನೆಸ್ ಕೂಡಾ ಸಾಬೀತುಪಡಿಸಲು ಉತ್ಸುಕರಾಗಿದ್ದಾರೆ.

ರಣಜಿ ಟ್ರೋಫಿ ಸೂಪರ್ ಲೀಗ್ ಹಂತದಲ್ಲಿ ಬಂಗಾಳ ತನ್ನ ಮೊದಲೆರಡು ಪಂದ್ಯಗಳಲ್ಲಿ ಗುಜರಾತ್ ಮತ್ತು ಮಧ್ಯ ಪ್ರದೇಶ ತಂಡಗಳನ್ನು ಎದುರಿಸಲಿದೆ. 16 ಸದಸ್ಯರ ತಂಡವನ್ನು ಮನೋಜ್ ತಿವಾರಿ ತಂಡವನ್ನು ಮುನ್ನಡೆಸಲಿದ್ದು, ವಿಕೆಟ್ ಕೀಪರ್ ವೃದ್ಧೀಮಾನ್ ಸಹಾ ಉಪನಾಯಕ ಜವಾಬ್ದಾರಿ ವಹಿಸಲಿದ್ದಾರೆ.

ತಂಡ ಇಂತಿದೆ: ಮನೋಜ್ ತಿವಾರಿ (ನಾಯಕ), ವೃದ್ಧೀಮಾನ್ ಸಹಾ (ಉಪನಾಯಕ), ಸೌರವ್ ಗಂಗೂಲಿ, ಲಕ್ಷ್ಮೀ ರತನ್ ಶುಕ್ಲಾ, ಅರಿಂದಮ್ ದಾಸ್, ರೋಹನ್ ಬೆನಾರ್ಜಿ, ಅಭಿಷೇಕ್ ಜುಂಜುನ್‌ವಾಲಾ, ಅರಿಂದಮ್ ಘೋಷ್, ಪಾರ್ಥಾ ಸಾರಥಿ ಬಟ್ಟಾಚಾರ್ಯ, ರಣದೇಬ್ ಬೋಸ್, ಅಶೋಕ್ ದಿಂಡಾ, ಮೊಹಮ್ಮದ್ ಸಮಿ ಅಹ್ಮದ್, ಸೌರಷಿಶ್ ಲಹಿರಿ, ಇರೇಶ್ ಸಕ್ಸೇನಾ, ವೃತಮ್ ಪೊರೆಲ್ ಮತ್ತು ಅನಿರ್ಬನ್ ಗುಪ್ತಾ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ