ದೇಹಕ್ಕೆ ವಿಶ್ರಾಂತಿಯ ಅಗತ್ಯ ಬೇಕೆಂದು ಅನಿಸಿತು : ಸಚಿನ್

ಸೋಮವಾರ, 18 ನವೆಂಬರ್ 2013 (15:05 IST)
PR
PR
ಮುಂಬೈ: ತನ್ನ ಜೀವನದ ಸೇ. 75% ಭಾಗವನ್ನು ಕ್ರಿಕೆಟ್ ಆಟದಲ್ಲಿ ಕಳೆದ ಸಚಿನ್ ತೆಂಡೂಲ್ಕರ್ ಅವರಿಗೆ ಆಟಕ್ಕೆ ಭಾವನಾತ್ಮಕ ವಿದಾಯ ಹೇಳಿದ ಮರುದಿನ ಬೆಳಿಗ್ಗೆ ಮಾಜಿ ಕ್ರಿಕೆಟಿಗ ಎಂಬ ಹಣೆಪಟ್ಟಿಯೊಂದಿಗೆ ಎದ್ದಾಗ ಒಂದು ರೀತಿಯ ವಿಚಿತ್ರ ಭಾವನೆ ಆವರಿಸಿತಂತೆ. ಭಾನುವಾರ ಸಂಜೆ ಮುಂಬೈನಗರದಲ್ಲಿ ನಡೆದ ವಿದಾಯದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಭಾವನೆಗಳನ್ನು ಸಚಿನ್ ಬಿಚ್ಚಿಟ್ಟಿರು.ತಮ್ಮ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳುವಲ್ಲಿ ಮಾಸ್ಟರ್ ಎನಿಸಿಕೊಂಡಿದ್ದ ಸಚಿನ್ ಗಂಭೀರವಾಗಿ ಮಾತನಾಡುತ್ತಾ, ಇದೊಂದು ಕನಸಿನ ಪ್ರಯಾಣವಾಗಿತ್ತು.

ನಾನು ಕ್ರಿಕೆಟ್ ಆಟವನ್ನು ತ್ಯಜಿಸುತ್ತಿರುವ ಬಗ್ಗೆ ವಿಷಾದವಿಲ್ಲ. ಕ್ರಿಕೆಟ್ ನಿಲ್ಲಿಸಲು ಸೂಕ್ತ ಕಾಲ ಎಂದು ಭಾವಿಸಿ ನಿವೃತ್ತಿಯಾಗಿದ್ದಾಗಿ ಹೇಳಿದರು.ನಿವೃತ್ತ ಕ್ರಿಕೆಟ್ ಆಟಗಾರರಾಗಿ ತಮ್ಮ ಪ್ರಥಮ ದಿನದ ಅನುಭವವನ್ನು ಸಚಿನ್ ಹೇಳುತ್ತಾ, ತಾವು ಎಂದಿನಂತೆ ಬೆಳಿಗ್ಗೆ ಎದ್ದಾಗ, ತಾನು ತರಬೇತಿಗೆ ಹೋಗಬೇಕಿಲ್ಲವೆಂದು ಮನಗಂಡು ತನಗೆ ಬಂದ ಸಂದೇಶಗಳಿಗೆ ಉತ್ತರಿಸಿ ಉಪಾಹಾರ ಸ್ವೀಕರಿಸಿದೆ. ನಾನು ಬೆಳಿಗ್ಗೆ 6.50ಕ್ಕೆ ಎದ್ದೆ. ನನ್ನ ದೇಹದ ಗಡಿಯಾರದ ಪ್ರಕಾರ ನಾನು ಸಾಮಾನ್ಯವಾಗಿ ಏಳುತ್ತೇನೆ.

PR
PR
ಇಂದು ಎದ್ದಕೂಡಲೇ ಕೂಡಲೇ ಸ್ನಾನಮಾಡುವ ಅಗತ್ಯವಿಲ್ಲವೆಂದು ಮನಗಂಡೆ. ಹೀಗಾಗಿ ನಾನು ಸ್ವಲ್ಪ ಚಹಾ ತಯಾರಿಸಿದೆ ಮತ್ತು ಪತ್ನಿಯ ಜತೆ ಉಪಾಹಾರ ಸ್ವೀಕರಿಸಿದೆ ಎಂದು ಹೇಳಿದರು.ಬಿಸಿಸಿಐ ಬ್ಲೇಜರ್ ಮತ್ತು ಟೈ ಧರಿಸಿದ್ದ ಸಚಿನ್ ಪತ್ರಕರ್ತರ ಪ್ರಶ್ನೆಗಳಿಗೆ ಸಹನೆಯಿಂದ ಉತ್ತರಿಸಿದರು. ಅವರ ಉತ್ತರಗಳು ಹಾಸ್ಯಮಿಶ್ರಿತವಾಗಿದ್ದವು.ಉದಾಹರಣೆಗೆ ನಿಮಗೆ ನೈಟ್ ಪದವಿ ನೀಡಿ 'ಸರ್' ಎಂದು ಕರೆಯುವ ಅವಕಾಶ ಬಂದಾಗ ಹೇಗನಿಸುತ್ತದೆ ಎಂಬ ಪ್ರಶ್ನೆಗೆ ಸಿರ್(ತಲೆ) ಇರುವ ಜಾಗದಲ್ಲಿ ಇರುತ್ತದೆ.

ಬಾಕಿಯನ್ನು ಯಾವಾಗ ಆಗುತ್ತೆ ನೋಡಿಕೊಳ್ಳುವ ಎಂದು ಹೇಳಿದರು.ನಿಮಗೆ ದೈಹಿಕ ಭಾರ ಸಾಕೆನಿಸಿದ ಸಂದೇಶ ನಿಮ್ಮ ದೇಹಕ್ಕೆ ಬಂದಾಗ, ದೇಹಕ್ಕೆ ವಿಶ್ರಾಂತಿಯ ಅಗತ್ಯವಿರುತ್ತದೆ. ನಾನು ತರಬೇತಿ ಸೆಷನ್‌ಗಳಿಗೆ ಹೋಗುವಾಗ, ಮುಂಚಿನಂತೆ ಇರಲಿಲ್ಲ. ತರಬೇತಿ ಬದಲಿಗೆ ಟಿವಿಯನ್ನು ಕೂಡ ನೋಡ್ತಿದ್ದೆ. ಅದಕ್ಕೆ ಉತ್ತರಹುಡುಕಿದಾಗ, ಈಗ ನಿವೃತ್ತಿಯಾಗಲು ಸೂಕ್ತ ಕಾಲವೆಂದು ಭಾವಿಸಿದ್ದಾಗಿ ತೆಂಡೂಲ್ಕರ್ ಹೇಳಿದರು.

ವೆಬ್ದುನಿಯಾವನ್ನು ಓದಿ