ಧೋನಿ ವಿರುದ್ಧ ಸುಳ್ಳು ಆರೋಪಗಳು: ಬಿಸಿಸಿಐ ಸ್ಪಷ್ಟನೆ

ಶುಕ್ರವಾರ, 28 ಮಾರ್ಚ್ 2014 (15:01 IST)
PR
PR
ನವದೆಹಲಿ: ಐಪಿಎಲ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಭಾರತ ತಂಡದ ನಾಯಕ ಧೋನಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ಭಾರತ ಕ್ರಿಕೆಟ್ ಮಂಡಳಿ ಸುಪ್ರೀಂಕೋರ್ಟ್‌ ನ್ಯಾಯಾಧೀಶರಿಗೆ ತಿಳಿಸಿದೆ. ತನಿಖೆಯ ಸಂದರ್ಭದಲ್ಲಿ ಶ್ರೀನಿವಾಸನ್ ಅಳಿಯ ಮೇಯಪ್ಪನ್ ಪಾತ್ರದ ಬಗ್ಗೆ ಧೋನಿ ಮಾತನಾಡುತ್ತಾ ಮೇಯಪ್ಪನ್ ಕೇವಲ ಕ್ರಿಕೆಟ್ ಪ್ರೇಮಿ ಎಂದು ಬಣ್ಣಿಸುವ ಮೂಲಕ ಸುಳ್ಳು ಹೇಳಿದ್ದಾರೆಂದು ಸರ್ಕಾರಿ ವಕೀಲ ಹರೀಶ್ ಸಾಳ್ವೆ ವಾದಿಸಿದ್ದರು.ಧೋನಿ ಅಂತಹ ಹೇಳಿಕೆಯನ್ನು ನೀಡಿಲ್ಲ ಎಂದು ಬಿಸಿಸಿಐ ವಕೀಲರು ಇಂದು ಸ್ಪಷ್ಟಪಡಿಸಿದರು.

ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಬೇಕೆಂದೂ ಅವರ ಬದಲಿಗೆ ಗವಾಸ್ಕರ್ ಬಿಸಿಸಿಐ ಹಂಗಾಮಿ ಅಧ್ಯಕ್ಷರಾಗಿ ಏಪ್ರಿಲ್ 16ರಿಂದ ಆರಂಭವಾಗುವ ಐಪಿಎಲ್ ಪಂದ್ಯಾವಳಿಯ ಉಸ್ತುವಾರಿ ವಹಿಸಬೇಕೆಂದೂ ಸುಪ್ರೀಂಕೋರ್ಟ್ ಇಂದು ತಿಳಿಸಿದೆ.ಮುಂದಿನ ಆದೇಶದವರೆಗೆ ಬಿಸಿಸಿಐ ಉಪಾಧ್ಯಕ್ಷ ಶಿವಲಾಲ್ ಯಾದವ್ ಎಲ್ಲ ಐಪಿಎಲ್ ಯೇತರ ವ್ಯವಹಾರಗಳನ್ನು ನಿರ್ವಹಿಸಲಿದ್ದಾರೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಹೊಸ ಪಾತ್ರದಲ್ಲಿ ಸಂಘರ್ಘ ಹಿತಾಸಕ್ತಿಯನ್ನು ತಪ್ಪಿಸಲು ಟೆಲಿವಿಷನ್ ವೀಕ್ಷಕವಿವರಣೆಕಾರ ಹುದ್ದೆಯಿಂದ ಕೆಳಕ್ಕಿಳಿಯಬೇಕೆಂದೂ ಗವಾಸ್ಕರ್ ಅವರಿಗೆ ಕೋರ್ಟ್ ತಿಳಿಸಿದ್ದು, ಸಂಪಾದನೆ ನಷ್ಟಕ್ಕೆ ಸೂಕ್ತವಾಗಿ ಪರಿಹಾರ ನೀಡಬೇಕು ಎಂದು ಬಿಸಿಸಿಐಗೆ ತಿಳಿಸಿದೆ.ಈ ವರ್ಷ ಐಪಿಎಲ್ ಏಪ್ರಿಲ್ 16ರಂದು ಆರಂಭವಾಗಲಿದ್ದು, ಯುನೈಟೆಡ್ ಅರಬೈ ಎಮಿರೇಟ್ಸ್‌ನಲ್ಲಿ ಆರಂಭಿಕ ಸುತ್ತಿನ ಪಂದ್ಯಗಳು ನಡೆಯಲಿವೆ.

ವೆಬ್ದುನಿಯಾವನ್ನು ಓದಿ