ಒಂದು ಹೊಸ ನೋಟದ ತಂಡವಾಗುವ ಆಶಯದಡಿಯಲ್ಲಿ ನೇಮಕರಾಗಿರುವ ತರಬೇತುದಾರ ಮೊಯಿನ್ ಖಾನ್ ಮತ್ತು ಮುಖ್ಯ ಸಲಹೆಗಾರರಾದ ಜಹೀರ್ ಅಬ್ಬಾಸ್ ರ ಗರಡಿಯಡಿಯಲ್ಲಿ ಪಾಕಿಸ್ತಾನಕ್ಕೆ ಏಷ್ಯಾ ಕಪ್ ಮೊದಲ ಪಂದ್ಯಾವಳಿಯಾಗಿದೆ. ಈ ಆಡಳಿತ ಬದಲಾವಣೆಯಿಂದ ಶಾಹಿದ್ ಆಫ್ರಿದಿ, ಬ್ಯಾಟಿಂಗ್ ನ ಲ್ಲಿ ಆಶ್ಚರ್ಯಕರ ರಿಟರ್ನ್ ಕಂಡುಬಂದಿದ್ದು ಭಾರತ ವಿರುದ್ಧ 18 ಎಸೆತಗಳಲ್ಲಿ 34 ರನ್ ಮತ್ತು ಬಾಂಗ್ಲಾ ವಿರುದ್ಧ 25 ಬಾಲ್ ಗಳಲ್ಲಿ 59 ರನ್ ಗಳ ಅಮೋಘ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಪಾಕಿಸ್ತಾನ ಫೈನಲ್ ತಲುಪಲು ಕಾರಣರಾಗಿದ್ದಾರೆ.
ಆದರೆ ಇದನ್ನು ಅಲ್ಲಗೆಳೆದಿರುವ ಆಫ್ರಿದಿ" ನನ್ನ ಆಟಕ್ಕೂ ಮತ್ತು ಆಡಳಿತ ಬದಲಾವಣೆಗೂ ಕಾರ್ಯಕಾರಣ ಸಂಬಂಧವಿಲ್ಲ. ಮೂಲಭೂತವಾಗಿ ನನ್ನ ತರಬೇತುದಾರ ನಾನೇ" ಎಂದು ಹೇಳಿದ್ದಾರೆ.
"ಈಗ ನಾವು ಹೊಂದಿರುವ ಸಫೋರ್ಟ ಟೀಮ್ ತಂಡ ಪ್ರಾಜ್ಞರಿಂದ ಕೂಡಿದ್ದು ನಮ್ಮಲ್ಲಿ ಧನಾತ್ಮಕತೆಯನ್ನು ಪ್ರೇರೇಪಿಸುತ್ತದೆ. ಈ ಮೊದಲು ನಾ ಹೇಳಿದಂತೆ ಅನೇಕ ವರ್ಷಗಳಿಂದ ಈ ಮಟ್ಟದಲ್ಲಿ ನಾನು ಆಟವಾಡಿದ್ದೇನೆ. ನನಗೆ ತರಬೇತುದಾರ ಅಗತ್ಯವಿಲ್ಲ".
"ಏನು ಮಾಡಬೇಕು, ಏನನ್ನು ಮಾಡಬಾರದು ಎಂಬುದು ನನಗೆ ಚೆನ್ನಾಗಿ ಗೊತ್ತು. ನನಗೆ ನಾನೇ ತರಬೇತಿ ನೀಡುಕೊಳ್ಳುವಷ್ಟು ನಾನು ಸಮರ್ಥನಾಗಿದ್ದೇನೆ " ಎಂದು ಅವರು ಹೇಳಿದ್ದಾರೆ.
ನಾವು ಸರಿಯಾದ ಸಮಯದಲ್ಲಿ ಏರಿಕೆಯನ್ನು ಕಂಡಿದ್ದೇವೆ. ಇದು ಮುಂಬರುವ ವಿಶ್ವ ಟ್ವೆಂಟಿ- 20 ಪಂದ್ಯಾವಳಿಯಲ್ಲಿ ನನಗೆ ಮತ್ತು ನಮ್ಮ ತಂಡಕ್ಕೆ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.