ನನ್ನ ಹಾಗೂ ಸಚಿನ್ ನಡುವೆ 'ಆಲ್ ಈಸ್ ವೆಲ್': ರಾಹುಲ್ ದ್ರಾವಿಡ್

ಶುಕ್ರವಾರ, 30 ಮಾರ್ಚ್ 2012 (11:28 IST)
WD
ಭಾರತದ ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ನಡುವೆ ಎಲ್ಲವೂ ಸರಿಹೋಗುತ್ತಿಲ್ಲ ಎಂಬ ವದಂತಿ ಸಾಕಷ್ಟು ಗೊಂದಲಗಳಿಗೆ ಎಡೆಮಾಡಿ ಕೊಟ್ಟಿದ್ದವು.

ಆದರೆ ಈ ಎಲ್ಲ ಊಹಾಪೋಹಾಗಳಿಗೆ ತೆರೆ ಎಳೆದಿರುವ ಸ್ವತ: ರಾಹುಲ್ ದ್ರಾವಿಡ್, ನನ್ನ ಹಾಗೂ ಸಚಿನ್ ನಡುವೆ 'ಆಲ್ ಈಸ್ ವೆಲ್' ಎಂದು ತ್ರಿ ಈಡಿಯೆಟ್ಸ್ ಚಿತ್ರ ಶೈಲಿಯಲ್ಲಿ ಡೈಲಾಗ್ ಹೊಡೆದರು.

ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದ ರಾಹುಲ್ ದ್ರಾವಿಡ್ ಅವರನ್ನು ಗೌರವಿಸುವ ಸಲುವಾಗಿ ಬಿಸಿಸಿಐ ಮಂಗಳವಾರ ಸನ್ಮಾನ ಕೂಟ ಏರ್ಪಡಿಸಲಾಗಿತ್ತು. ಆದರೆ ಸಮಾರಂಭಕ್ಕೆ ಸಚಿನ್ ತೆಂಡೂಲ್ಕರ್ ಗೈರು ಹಾಜರಿ ಹಲವು ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದ್ದವು.

ಆದರೆ ಕಾಲ ಬೆರಳು ನೋವು ಸಂಬಂಧ ವೈದ್ಯರ ಜತೆ ಸಮಾಲೋಚಿಸಲು ಲಂಡನ್‌ಗೆ ತೆರಳಿರುವುದೇ ಸಚಿನ್ ಅನುಪಸ್ಥಿತಿಗೆ ಕಾರಣವಾಗಿತ್ತು. ಸಚಿನ್ ಪ್ರವಾಸ ಪೂರ್ವ ನಿಗದಿಯದ್ದಾಗಿತ್ತು. ಅಲ್ಲದೆ ದ್ರಾವಿಡ್ ಅವರನ್ನು ಸಂಪರ್ಕಿಸಿ ತಮ್ಮ ಗೈರು ಹಾಜರಿಯನ್ನು ತಿಳಿಸಿದ್ದರು.

ಜನರು ಅಸಂಬದ್ಧವಾಗಿ ಮಾತನಾಡುತ್ತಾರೆ. ಸಚಿನ್ ಹಾಗೂ ನಾನು ಉತ್ತಮ ಸ್ನೇಹಿತರಾಗಿದ್ದು, ಎಲ್ಲವೂ ಸರಿ ಹೋಗುತ್ತಿದೆ. ಸೋಮವಾರ ಲಂಡನ್ ಪ್ರವಾಸಕ್ಕೂ ಮುನ್ನ ನನಗೆ ಕರೆ ಮಾಡಿದ್ದ ಅವರು ಸಮಾರಂಭಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ತಿಳಿಸಿರುವುದಾಗಿ ದ್ರಾವಿಡ್ ವಿವರಿಸಿದರು.

ವೆಬ್ದುನಿಯಾವನ್ನು ಓದಿ