ನಾಳೆ ಭಾರತ-ವೆಸ್ಟ್‌ಇಂಡೀಸ್ ನಿರ್ಣಾಯಕ 3ನೇ ಏಕದಿನ ಪಂದ್ಯ

ಮಂಗಳವಾರ, 26 ನವೆಂಬರ್ 2013 (14:25 IST)
PR
PR
ಕಾನ್ಪುರ: ಕಳೆದ ಪಂದ್ಯದಲ್ಲಿ ಅನನುಕೂಲ ಬೌಲಿಂಗ್ ಸ್ಥಿತಿಗತಿಗಳಿಂದ ಭಾರತ ಸೋತಿದ್ದರೂ, ಮೂರನೇ ಏಕದಿನ ಪಂದ್ಯದಲ್ಲಿ ಗೆಲುವು ಗಳಿಸುವ ಮೂಲಕ ಸರಣಿಯನ್ನು ಕೈವಶಮಾಡಿಕೊಂಡು ಭಾರತ ತನ್ನ ಬಲಾಢ್ಯತೆಯನ್ನು ಪ್ರತಿಪಾದಿಸುವ ಹವಣಿಕೆಯಲ್ಲಿದೆ. ವೆಸ್ಟ್ ಇಂಡೀಸ್ ದೇಶಕ್ಕೆ ಆಗಮಿಸಿದ ನಂತರ, ಭಾರತ ವಿಶಾಖಪಟ್ನಂನಲ್ಲಿ ಎರಡು ವಿಕೆಟ್ ಸೋಲನುಭವಿಸಿತು. ಇದರಿಂದ ವೆಸ್ಟ್ ಇಂಡೀಸ್ ಆತ್ಮವಿಶ್ವಾಸ ಹೆಚ್ಚಿದ್ದು, ಕನಿಷ್ಠ ಏಕದಿನ ಸರಣಿಯನ್ನು ಗೆದ್ದುಕೊಂಡು ಹಿಂತಿರುಗುವ ಗುರಿಯನ್ನು ಹೊಂದಿದೆ. ಭಾರತಕ್ಕೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುಂಚೆ ಇದು ಸ್ವದೇಶದಲ್ಲಿ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿದ್ದು ಈ ಸರಣಿಯನ್ನು ಗೆದ್ದುಕೊಳ್ಳಲು ಹಂಬಲಿಸಿದೆ.

ಭಾರತದ ಬ್ಯಾಟಿಂಗ್ ಲೈನ್‌ಅಪ್ ದೃಢ ನೋಟದಿಂದ ಕೂಡಿದೆ. ಕೆಲವು ಆಟಗಾರರನ್ನು ಹೊರತುಪಡಿಸಿದರೆ, ಇತ್ತೀಚೆಗೆ ಬ್ಯಾಟಿಂಗ್ ಡಿಪಾರ್ಟ್‌ಮೆಂಟ್ ಉತ್ತಮ ಫಾರಂನಲ್ಲಿದೆ. ಅಗ್ರ ಮೂವರಲ್ಲಿ ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಭಾರತದ ಬ್ಯಾಟಿಂಗ್‌ನ ನಿಜವಾದ ಶಕ್ತಿಗಳಾಗಿದ್ದಾರೆ.ಎರಡು ಪಂದ್ಯಗಳಲ್ಲಿ 86 ಮತ್ತು 99 ರನ್‌ಗಳೊಂದಿಗೆ ಕೊಹ್ಲಿ ಉತ್ತಮ ಫಾರಂನಲ್ಲಿದ್ದಾರೆ. ಆದರೆ ಮಧ್ಯಮಕ್ರಮಾಂಕದಲ್ಲಿ ಯುವರಾಜ್ ಮತ್ತು ಸುರೇಶ್ ರೈನಾ ಫಾರಂ ಧೋನಿ ಆತಂಕಕ್ಕೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ