ಪತನದ ಹಾದಿಯಲ್ಲಿ ಭಾರತೀಯ ಬ್ಯಾಟಿಂಗ್

ಗುರುವಾರ, 30 ಆಗಸ್ಟ್ 2007 (20:53 IST)
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತದ ಬ್ಯಾಟಿಂಗ್ ಪತನದ ಹಾದಿಯಲ್ಲಿ ಸಾಗಿದೆ. ವಿನಾಕಾರಣ ಕಾಲ್ಚನೆಯಿಲ್ಲದೆ ಕಾರ್ತಿಕ್ ಮತ್ತು ಸೌರವ್ ಗಂಗೂಲಿ ಹುದ್ದರಿ ಒಪ್ಪಿಸಿರುವ ರೀತಿಯನ್ನು ನೋಡಿದರೆ, ಟೀಮ್ ಇಂಡಿಯಾದ ಬ್ಯಾಟಿಂಗ್ ಬಲ ಇಂಗ್ಲೆಂಡ್ ಪ್ರವಾಸದಲ್ಲಿ ತಳ ಕಂಡಿದೆ ಎಂಬ ಭಾವನೆ ವ್ಯಕ್ತವಾಗುತ್ತಿದೆ.

ಕ್ರೀಸ್‌ನಲ್ಲಿರುವ ಸಚಿನ್ ತೆಂಡುಲ್ಕರ್ 25 ರನ್‌ಗಳನ್ನು 51 ಎಸೆತಗಳಲ್ಲಿ ಗಳಿಸಿದ್ದು, ಭಾರತದ ಮೊತ್ತ ಮೂರು ಅಗ್ರರ ಪತನದ ನಂತರದ 22 ಓವರುಗಳ ನಂತರ ಅರ್ಧಶತಕದ (68) ಗಡಿಯನ್ನು ದಾಟಿದ್ದು, ಆಕ್ರಮಣಕ ಬ್ಯಾಟಿಂಗ್ ಕೈಬಿಟ್ಟು ಯುವರಾಜ್ ಸಿಂಗ್ (3)ಮತ್ತು ಸಚಿನ್ ತೆಂಡುಲ್ಕರ್ ವಿಕೆಟ್ ರಕ್ಷಣೆಯತ್ತ ಗಮನವನ್ನು ಕೇಂದ್ರೀಕರಿಸಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಲು ಇಳಿದ ಟೀಮ್ ಇಂಡಿಯಾದ ಪಾಲಿಗೆ ಆಂಡ್ರೂ ಫ್ಲಿಂಟಾಫ್ ಶನಿಯಾಗಿ ವಕ್ಕರಿಸಿದ್ದಾರೆ. ತವರು ಪಿಚ್‌ನಲ್ಲಿ ನಾಲ್ಕನೆ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುತ್ತಿರುವ ಪ್ರೆಡ್ಡಿ ನಾಲ್ಕು ಒವರುಗಳ ಬೌಲಿಂಗ್‌ನಲ್ಲಿ ರಾಹುಲ್ ದ್ರಾವಿಡ್ ವಿಕೆಟ್ ಉರುಳಿಸುವುದರೊಂದಿಗೆ ಭಾರತಕ್ಕೆ ಬಹುದೊಡ್ಡ ಆಘಾತ ನೀಡಿದ್ದಾರೆ.

ಇನ್ನಿಂಗ್ಸ್ ಆರಂಭಿಸಿದ ಸಚಿನ್- ಸೌರವ್ ಜೋಡಿ ಆಟ ಕುದುರಿಕೊಳ್ಳುವ ಅವಕಾಶ ದೊರೆಯಲಿಲ್ಲ. ಅಂಡರ್ಸನ್ ಬೌಲಿಂಗ್‌ನಲ್ಲಿ ಚೆಂಡನ್ನು ಪಾಯಿಂಟ್‌ನತ್ತ ತಳ್ಳಲು ಯತ್ನಿಸಿದ ಸೌರವ್ ಬೆಲ್ ಕೈಗೆ ಚೆಂಡು ನೀಡಿದಾಗ ತಂಡದ ಮೊತ್ತ ಬರಿ 17 ರನ್. ಅವರ ಖಾತೆಯಲ್ಲಿ ಇದ್ದುದು 9 ರನ್. ಆಕರ್ಷಕವಾಗಿ ಎರಡು ಬೌಂಡರಿ ಬಾರಿಸಿ, ಗಮನ ಸೆಳೆದಿದ್ದ ಗಂಗೂಲಿ ವಿಕೆಟ್ ಪತನಗೊಳ್ಳುವ ಮೂಲಕ ಭಾರತೀಯ ಬ್ಯಾಟ್ಸ್‌ಮನ್‌ಗಳ ಪೆವಿಲಿಯನ್ ಪೆರೆಡ್ ಪ್ರಾರಂಭವಾಯಿತು. ನಂತರ ಕ್ರೀಸ್‌ಗೆ ಬಂದ ಕಾರ್ತಿಕ್ (4) ಮತ್ತು ರಾಹುಲ್ ದ್ರಾವಿಡ್ (1) ರನ್ ಮಾಡಿ ಪೆವಿಲಿಯನ್‌ಗೆ ಮರಳಿದರು.

ವೆಬ್ದುನಿಯಾವನ್ನು ಓದಿ