ಪಾಕಿಸ್ತಾನ, ಶ್ರೀಲಂಕಾ ಶನಿವಾರ ಏಷ್ಯಾ ಕಪ್ ಫೈನಲ್‌ಗೆ ಸಜ್ಜು

ಶುಕ್ರವಾರ, 7 ಮಾರ್ಚ್ 2014 (15:56 IST)
PR
PR
ಮಿರ್‌ಪುರ್:ಹಾಲಿ ಚಾಂಪಿಯನ್ ಪಾಕಿಸ್ತಾನದ ಶಾಹಿದ್ ಅಫ್ರಿದಿ ಮತ್ತು ಉಮರ್ ಗುಲ್ ಅವರಿಗೆ ಸಣ್ಣ ಪುಟ್ಟ ಗಾಯದ ಸಮಸ್ಯೆಗಳಿಗೆ ಒಳಗಾಗಿರುವ ನಡುವೆ ಶ್ರೀಲಂಕಾ ವಿರುದ್ಧ ಏಷ್ಯಾ ಕಪ್ ಫೈನಲ್ ಪಂದ್ಯವನ್ನು ಶನಿವಾರ ಆಡಲಿದೆ. ಈ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ಅದೃಷ್ಟವನ್ನು ತಿರುಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಫ್ರಿದಿ, ಸೊಂಟದ ನೋವಿನಿಂದ ಬಳಲುತ್ತಿದ್ದು, ಶನಿವಾರವೇ ಅವರ ಲಭ್ಯತೆ ಬಗ್ಗೆ ಗೊತ್ತಾಗಲಿದೆ. ಪಂದ್ಯಾವಳಿಯ ಆರಂಭದ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಶ್ರೀಲಂಕಾ ಆತ್ಮವಿಶ್ವಾಸದಿಂದ ಕೂಡಿದೆ.

PR
PR
ಕುಮಾರ ಸಂಗಕ್ಕಾರಾ ಅವರನ್ನು ಯಾವ ರೀತಿಯಲ್ಲಿ ಕಟ್ಟಿಹಾಕ್ತಾರೆ ಮತ್ತು ಲಸಿತ್ ಮಾಲಿಂಗ ಮತ್ತು ಸ್ಪಿನ್ನರ್ ಅಜಂತಾ ಮೆಂಡಿಸ್ ಬೌಲಿಂಗ್ ಹೇಗೆ ನಿಭಾಯಿಸುತ್ತಾರೆ ಎಂಬ ಆಧಾರದ ಮೇಲೆ ಪಾಕಿಸ್ತಾನದ ಅದೃಷ್ಟ ಅವಲಂಬಿಸಿದೆ.ಹಿಂದಿನ ಆಟದಲ್ಲಿ ಮಾಲಿಂಗ ಮಿಷಬ್ ಉಲ್ ಹಕ್ ಮತ್ತು ಅಫ್ರಿದಿ ವಿಕೆಟ್ ಕಬಳಿಸಿದ್ದರು. ಸಂಗಕ್ಕರಾ ಒಂದು ಶತಕ ಮತ್ತು ಎರಡು ಅರ್ಧಶತಕ ಬಾರಿಸುವ ಮೂಲಕ ಉತ್ತಮ ಫಾರಂನಲ್ಲಿದ್ದಾರೆ.ಪಾಕಿಸ್ತಾನ ಕಷ್ಟದ ಸನ್ನಿವೇಶಗಳಿಂದ ಬಚಾವಾಗಿ ಏಷ್ಯಾ ಕಪ್ ಫೈನಲ್ ತಲುಪಿದ್ದಾರೆ.ಅಫ್ರಿದಿ ಅವರು ಭಾರತ ಮತ್ತು ಬಾಂಗ್ಲಾದೇಶ ವಿರುದ್ದ ಬಿಡುಬೀಸಿನ 34 ಮತ್ತು 59 ರನ್‌ ಗಳಿಸಿದ್ದರಿಂದ ಅಫ್ರಿದಿಗೆ ಈ ಕ್ರೆಡಿಟ್ ಸಲ್ಲುತ್ತದೆ.

ವೆಬ್ದುನಿಯಾವನ್ನು ಓದಿ