ಪಿಸಿಬಿ ಅಧ್ಯಕ್ಷರ ಆಯ್ಕೆ ವಿರೋಧಿಸಿ ಕೋರ್ಟ್‌ಗೆ ಮೊರೆ

ಶುಕ್ರವಾರ, 28 ಜೂನ್ 2013 (14:11 IST)
ಪಾಕಿಸ್ಥಾನ ಕ್ರಿಕೆಟ್‌ ಮಂಡಳಿಯ ಹಂಗಾಮಿ ಅಧ್ಯಕ್ಷರಾಗಿ ನಜಮ್‌ ಸೇಥಿ ಆಯ್ಕೆ ಆಗಿರುವುದನ್ನು ವಿರೋಧಿಸಿ ಇಸ್ಲಾಮಾಬಾದ್‌ ನ್ಯಾಯಾಲಯದ ಮೊರೆ ಹೋಗಲಾಗಿದೆ.

ದಾವೆದಾರ ಅಬ್ದುಲ್ಲ ತಾಹಿರ್‌, ಈ ಆಯ್ಕೆಯ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಆಪಾದಿಸಿದ್ದಾರೆ. ಇದು ಸಂವಿಧಾನದ ಉಲ್ಲಂಘನೆಯೂ ಹೌದು ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ