ಬದಲಾವಣೆಗೆ ಸೂಕ್ತ ಸಮಯವಲ್ಲ

ಭಾನುವಾರ, 30 ಡಿಸೆಂಬರ್ 2007 (11:44 IST)
ಸೋಲಿನಿಂದ ಕಂಗೆಟ್ಟಿದ್ದರೂ, ಪೈಪೋಟಿಯಿಂದ ಹಿಂದೆ ಸರಿಯದ ಟೀಮ್ ಇಂಡಿಯಾ ತನ್ನ ಬ್ಯಾಟಿಂಗ್ ವೈಫಲ್ಯಗಳ ಕುರಿತು ವಿಚಾರ ಮಾಡುತ್ತಿದೆ. ಎಂಸಿಜಿಯಲ್ಲಿ 337 ರನ್‌ಗಳ ಸೋಲು, ಇತ್ತೀಚಿನ ದಿನಗಳಲ್ಲಿ ಭಾರತ ಅನುಭವಿಸಿದ ಹೀನಾಯಕರ ಸೋಲು ಆಗಿದ್ದು, ಈ ಸಮಯದಲ್ಲಿ ತಂಡದಲ್ಲಿ ಬದಲಾವಣೆ ತಂದಲ್ಲಿ ಕ್ರಿಕೆಟಿಗರ ಆತ್ಮವಿಶ್ವಾಸ ಕುಸಿಯಬಹುದು ಆದ್ದರಿಂದ ಸಿಡ್ನಿ ಪಿಚ್ ಪರೀಶಿಲಿಸಿದ ನಂತರವೆ ಆಡುವ ಹನ್ನೊಂದು ಕ್ರಿಕೆಟಿಗರ ತಂಡವನ್ನು ಪ್ರಕಟಿಸಲಾಗುವುದು.

ಈಗಾಗಲೇ ಸೋಲಿನಿಂದ ತಂಡದ ಬ್ಯಾಟ್ಸ್‌ಮನ್‌ಗಳಲ್ಲಿ ವಿಷಾದವಿದ್ದು, ಸೋಲಿನಿಂದ ಚೇತರಿಸಿಕೊಳ್ಳುತ್ತಿರುವ ಬ್ಯಾಟ್ಸ್‌ಮನ್‌ಗಳಿಗೆ ಮಾನಸಿಕ ವಿಶ್ರಾಂತಿ ಅವಶ್ಯವಿರುವುದರಿಂದ ಅಭ್ಯಾಸದಲ್ಲಿ ತಂಡ ತೊಡಗಿಕೊಂಡಿಲ್ಲ. ಮೆಲ್ಬರ್ನ್ ಟೆಸ್ಟ್‌ನಲ್ಲಿ ಅತಿಯಾದ ರಕ್ಷಣಾತ್ಮಕ ಆಟವಾಡಿದ್ದು ಸೋಲಿಗೆ ಕಾರಣವಾಯಿತು. ರಕ್ಷಣಾತ್ಮಕ ಮನೋಭಾವದಿಂದ ಕ್ರಿಕೆಟಿಗರು ಹೊರಬಂದು ಸಿಡ್ನಿ ಟೆಸ್ಟ್‌ಗೆ ಸಿದ್ದವಾಗಬೇಕಿದೆ ಕಾರಣ ಅಭ್ಯಾಸವನ್ನು ಬದಿಗೊತ್ತಿ ತಂಡದ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ತಂಡದ ಸಹಾಯಕ ಕೋಚ್ ಲಾಲ್ ಚಂದ್ ರಜಪೂತ್ ಹೇಳಿದರು.

ಸೋಲಿನ ನಂತರ ನಡೆದ ತಂದ ಸಭೆಯಲ್ಲಿ ರನ್ ನೀಡದೇ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ತಂದು ವಿಕೆಟ್ ಕೀಳುವುದು ಆಸಿಸ್ ತಂಡ ಮೊದಲಿನಿಂದಲೂ ಅನುಸರಿಸಿಕೊಂಡು ಬಂದಿರುವ ತಂತ್ರ. ಈ ತಂತ್ರ ನಮಗೆ ಹೊಸತಲ್ಲ ಆದರೂ ನಾವು ಈ ತಂತ್ರಕ್ಕೆ ಬಲಿಯಾದೆವು. ಮಾನಸಿಕವಾಗಿ ಎದುರಾಳಿ ತಂಡವನ್ನು ಕುಸಿಯುವಂತೆ ಮಾಡುವ ಕಾಂಗರೂಗಳ ತಂತ್ರ ಫಲಿಸಿತು. ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಮಾನಸಿಕ ಒತ್ತಡಗಳಿಗೆ ಒಳಗಾಗದೇ ಆಟದತ್ತ ಗಮನ ನೀಡಲಾಗುವುದು ಎಂದು ರಜಪೂತ್ ಹೇಳಿದರು.

ವೆಬ್ದುನಿಯಾವನ್ನು ಓದಿ