ಬಿಗಿ ಭದ್ರತೆಯಲ್ಲಿ ಇಂದು ಇಂಡೊ- ಆಸಿಸ್ ಪಂದ್ಯ

ಶನಿವಾರ, 29 ಸೆಪ್ಟಂಬರ್ 2007 (09:45 IST)
ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯ ನಡುವೆ ಇಂದಿನಿಂದ ಏಳು ಏಕದಿನ ಪಂದ್ಯಗಳ ಸರಣಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಲಿದ್ದು, ಸರಣಿಯ ಮೊದಲ ಏಕದಿನ ಪಂದ್ಯಕ್ಕೆ ಮೂರು ಸಾವಿರ ಪೊಲೀಸ್ ಪಡೆಗಳ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.

ಆತಂಕವಾದ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪಂದ್ಯಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. 3 ಸಾವಿರ ಪೊಲೀಸ್ ಪಡೆ ಅಲ್ಲದೇ, ಬಾಂಬ್ ನಿಷ್ಕ್ರೀಯ ದಳ ಮತ್ತು ಕ್ಷೀಪ್ರ ಕಾರ್ಯಾಚರಣೆ ಪಡೆಯನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಯೋಜಿಸಲಾಗಿದೆ.

ಹೊನಲು ಬೆಳಕಿನಲ್ಲಿ ಪಂದ್ಯ ನಡೆಯಲಿದ್ದು, ಪಂದ್ಯದ ಎಲ್ಲ ಟಿಕೆಟ್‌ಗಳು ಮಾರಾಟವಾಗಿವೆ. 55 ಸಾವಿರ ಪ್ರೇಕ್ಷಕರು ಸರಣಿಯ ಮೊದಲ ಪಂದ್ಯವನ್ನು ವಿಕ್ಷೀಸಲು ಆಗಮಿಸಲಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಡೆಪ್ಯುಟಿ ಕಮಿಷನರ್ ಬಿ.ಎನ್,ಎಸ್ ರೆಡ್ಡಿ, " ಪಂದ್ಯ ಸೂಸುತ್ರವಾಗಿ ನಡೆಯುವುದಕ್ಕೆ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದೆವೆ. ಒಂದು ಪಕ್ಷ ದುರ್ಘಟನೆ ಸಂಭವಿಸಿದಲ್ಲಿ ತುರ್ತು ಪರಿಹಾರ ಒದಗಿಸುವುದಕ್ಕೆ ಎಂದು ಹದಿನೆಂಟು ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡಿರುವ ವಿಕೋಪ ವ್ಯವಸ್ಥಾಪನ ಘಟಕವನ್ನು ಸ್ಥಾಪಿಸಲಾಗಿದ್ದು, ಅಂತಹ ಸಂದರ್ಭ ತಲೆದೊರಿದಲ್ಲಿ ಹದಿನೈದು ನಿಮಿಷಗಳಲ್ಲಿ ಕಾರ್ಯಾಚರಣೆಗೆ ಇಳಿಯಲಿದೆ.

ವೆಬ್ದುನಿಯಾವನ್ನು ಓದಿ