ಬ್ಯಾಟಿಂಗ್ ವಿಫಲವೇ ಸೋಲಿಗೆ ಕಾರಣ

ಶುಕ್ರವಾರ, 31 ಆಗಸ್ಟ್ 2007 (16:44 IST)
ಕೂದಲೆಳೆಯ ಅಂತರದಿಂದ ಪಂದ್ಯದ ಗೆಲವನ್ನು ತಪ್ಪಿಸಿಕೊಂಡ ಭಾರತ. ಇಂಗ್ಲೆಂಡ್ ವಿರುದ್ಧ ನಡೆದಿರುವ ಏಳು ಏಕದಿನ ಪಂದ್ಯಗಳ ಸರಣಿಯಲ್ಲಿ 3-1 ಅಂತರದಲ್ಲಿ ಹಿಂದೆ ಇದ್ದು, ನಾಲ್ಕನೆ ಪಂದ್ಯದಲ್ಲಿ ನಾವು ಇನ್ನೂ ಹೆಚ್ಚಿಗೆ 25 ರನ್‌ಗಳಿಸಿದ್ದರೆ ಎದುರಾಳಿ ಇಂಗ್ಲೆಂಡ್ ತಂಡಕ್ಕೆ ಗೆಲುವು ಸಾಧ್ಯವಾಗುತ್ತಿರಲಿಲ್ಲ ಎಂದು ಟೀಮ್ ಇಂಡಿಯಾ ತಂಡದ ನಾಯಕ ರಾಹುಲ್ ದ್ರಾವಿಡ್, ಪಂದ್ಯದ ನಂತರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಲ್ಪ ಎನ್ನಬಹುದಾದ 212 ರನ್‌ಗಳನ್ನು ರಕ್ಷಿಸುವಲ್ಲಿ ಬೌಲರುಗಳು ಅತ್ಯುತ್ತಮ ಪ್ರಯತ್ನ ಮಾಡಿದರು. ಇಂಗ್ಲೆಂಡ್ ತಂಡದ ಅಗ್ರ ಪಂಕ್ತಿಯ ಬ್ಯಾಟ್ಸ್‌ಮನ್‌ಗಳನ್ನು 95 ರನ್ ಕಲೆಹಾಕುವಷ್ಟರಲ್ಲಿ ಪೆವಿಲಿಯನ್‌ಗೆ ಮರಳಿಸುವಲ್ಲಿ ಬೌಲಿಂಗ್ ವಿಭಾಗ ಯಶಸ್ವಿಯಾಗಿ, ಒಂದು ಹಂತದಲ್ಲಿ ಏಳು ಹುದ್ದರಿ ಕಳೆದುಕೊಂಡು ಸೋಲಿನ ದವಡೆಗೆ ಇಂಗ್ಲೆಂಡ್ ಸಿಲುಕಿತ್ತು.

ರವಿ ಬೋಪಾರಾ ಮತ್ತು ಸ್ಟುವರ್ಟ್ ಬ್ರಾಡ್ ನಡುವಿನ ಎಂಟನೆ ವಿಕೆಟ್ ಜೊತೆಯಾಟದಲ್ಲಿ ಅಜೇಯ 99 ರನ್‌ಗಳು ಇಂಗ್ಲೆಂಡ್ ತಂಡದ ಗೆಲುವಿಗೆ ಕಾರಣವಾಯಿತು. ಎಂಟನೆ ವಿಕೆಟ್ ಜೋಡಿಯನ್ನು ಬೆರ್ಪಡಿಸುವುದಕ್ಕೆ ಸಾಧ್ಯವಾದ ಪ್ರಯತ್ನ ಬೌಲರುಗಳಿಂದ ಆಯಿತು ಆದರೂ ಬೋಪಾರಾ- ಬ್ರಾಡ್ ಜೋಡಿ ಮುರಿಯಲಿಲ್ಲ. ಇಂಗ್ಲೆಂಡ್ ತಂಡದ ಇಂದಿನ ಗೆಲುವಿಗೆ ಬೊಪಾರಾ- ಬ್ರಾಡ್, ಬ್ಯಾಟಿಂಗ್ ಕಾರಣ, ಪಂದ್ಯದ ಗೆಲುವಿನ ಶ್ರೇಯಸ್ಸು ಅವರಿಬ್ಬರಿಗೆ ಸಲ್ಲಬೇಕು.

ಅಂತಿಮವಾಗಿ ಪಂದ್ಯವನ್ನು ವಿಶ್ಲೇಷಿಸಿದಾಗ ನಮ್ಮ ತಂಡ ಇನ್ನೂ 25 ರನ್ ಮಾಡಿದ್ದರೆ ಗೆಲುವು ನಮ್ಮದಾಗುತ್ತಿತ್ತು ಎಂದು ನಿರಾಸೆಯಿಂದ ದ್ರಾವಿಡ್ ಹೇಳಿದರು.

ವೆಬ್ದುನಿಯಾವನ್ನು ಓದಿ