ಭಾರತವೇ ಫೆವರಿಟ್: ಅಕ್ರಮ್

ಮಂಗಳವಾರ, 30 ಅಕ್ಟೋಬರ್ 2007 (18:50 IST)
ಬದ್ಧ ವೈರಿಗಳ ನಡುವೆ ನವ್ಹಂಬರ್ ಐದರಿಂದ ಪ್ರಾರಂಭವಾಗಲಿರುವ ಟೆಸ್ಟ್ ಮತ್ತು ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಫೆವರಿಟ್ ತಂಡವಾಗಿದೆ, ಶೋಯಬ್ ಅಖ್ತರ್ ಮಗ್ಗಲು ಮುಳ್ಳಾಗಿ ಭಾರತೀಯ ಬ್ಯಾಟ್ಸ್‌ಮನ್‍ಗಳನ್ನು ಕಾಡಬಹುದು ಆದರೆ ಅವರು ಭಾರತೀಯ ಪಿಚ್‍ಗಳ ಮೊದಲು ಲಯ ಕಂಡುಕೊಳ್ಳಬೇಕು.

ಕ್ರಿಕೆಟ್ ಜಗತ್ತಿಗೆ ಸ್ವಿಂಗ್ ಪರಿಚಯಿಸಿದ ಅಕ್ರಂ, ಕ್ರಿಕೆಟ್ ಜಗತ್ತಿನಲ್ಲಿ ವಿವಾದಾತೀತ ಸ್ವಿಂಗ್ ಸುಲ್ತಾನ್ ಇಂದಿಗೂ ಅವರ ಹಾಗೆ ಸ್ವಿಂಗ್ ಮಾಡುವ ಕಲೆ ಯಾರಿಗೂ ಒಲಿದಿಲ್ಲ. ಪ್ರಸಕ್ತ ಸರಣಿಯ ಕುರಿತು ಗಲ್ಫ್ ನ್ಯೂಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಯಾವ ದೃಷ್ಟಿಕೋನದಿಂದ ನೋಡಿದರೂ ಭಾರತವೇ ಸರಣಿಯ ಫೆವರಿಟ್. ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಹಿಂತಿರುಗಿಸುವುದು ಕಷ್ಟದ ಮಾತು. ಏಕದಿನ ಸರಣಿಯಲ್ಲಿ ಮಾತ್ರ ಎರಡು ತಂಡಗಳು ಸಮತೂಕ ಸಾಧಿಸಿವೆ.

ಆದರೆ ಟೆಸ್ಟ್‌ನಲ್ಲಿ ನಿಸ್ಸಂಶಯವಾಗಿ ಭಾರತ ಮೆಲುಗೈ ಹೊಂದಿದ್ದು, ಪಾಕಿಸ್ತಾನ ತಂಡಕ್ಕೆ ಇಂಜಮಾಮ್ ಉಲ್ ಹಕ್ ಅವರ ಅನುಪಸ್ಥಿತಿ ಕಾಡುವುದು ಖಚಿತ ಇಂಜಮಾಮ್ ಅವರಿಂದ ತೆರವಾಗಿರುವ ಮದ್ಯಮ ಕ್ರಮಾಂಕ ಅವಶ್ಯಕತೆಗೆ ತಕ್ಕ ಆಟ ಪ್ರದರ್ಶಿಸುವಲ್ಲಿ ವಿಫಲವಾಗುವುದು ಖಂಡಿತ ಎಂದು ಹೇಳಿದ್ದಾರೆ.

ಉಭಯ ತಂಡಗಳ ನಾಯಕತ್ವ ಇಂದು ಯುವಕರ ಕೈಯಲ್ಲಿದ್ದು, ಉಭಯ ನಾಯಕರು ಪರಿಸ್ಥಿತಿಯನ್ನು ಬೇಗ ಅರ್ಥಮಾಡಿಕೊಂಡು ಪಂದ್ಯವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ದರಿಂದ ಉಭಯ ನಾಯಕರು ಒತ್ತಡ ಪರಿಸ್ಥಿತಿ ಎದುರಿಸುವುದಂತೂ ನಿಶ್ಚಿತ ಎಂದು ಅಕ್ರಂ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ