ಭಾರತೀಯ ಕ್ರಿಕೆಟ್ ತಂಡದ ಹೊಣೆ ಅನಿಲ್ ಕುಂಬ್ಳೆಗೆ ವಹಿಸಿಕೊಡಿ

ಶುಕ್ರವಾರ, 2 ಸೆಪ್ಟಂಬರ್ 2011 (15:24 IST)
ಇಂಗ್ಲೆಂಡ್‌ನಲ್ಲಿ ಎದುರಾದ ಹೀನಾಯ ಸೋಲಿನ ನಂತರ ಭಾರತೀಯ ಕ್ರಿಕೆಟ್ ತಂಡವು ತೀವ್ರ ತರಹದ ಮುಖಭಂಗಕ್ಕೊಳಗಾಗಿದೆ. ಹೀಗಾಗಿ ಪುನಶ್ಚೇತನದ ಹಾದಿಯಲ್ಲಿರುವ ಭಾರತಕ್ಕೆ ಹಲವು ಮಾಜಿ ಕ್ರಿಕೆಟಿಗರು ಸಲಹೆ ಸೂತ್ರಗಳನ್ನು ನೀಡುವ ತಂತ್ರಕ್ಕೆ ಮುಂದಾಗಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇದರಂತೆ ಹೇಳಿಕೆ ನೀಡಿರುವ ಭಾರತದ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಣಾ ವಿವರಣೆಗಾರ ಆಗಿರುವ ಸಂಜಯ್ ಮಂಜ್ರೇಕರ್, ಭಾರತೀಯ ಕ್ರಿಕೆಟ್ ಸರಿಯಾದ ದಿಕ್ಕಿನತ್ತ ಸಾಗುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮೂವರು ಸದಸ್ಯರ ಸಮಿತಿಯನ್ನು ರೂಪಿಸಬೇಕಾಗಿದ್ದು, ಇದರ ಸಂಪೂರ್ಣ ಜವಾಬ್ದಾರಿಯನ್ನು ಖ್ಯಾತ ಲೆಗ್ ಸ್ಪಿನ್ನರ್ ಹಾಗೂ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರಿಗೆ ವಹಿಸಿಕೊಡಬೇಕು ಎಂದು ಸಲಹೆ ಮಾಡಿದ್ದಾರೆ.

ತಂಡವನ್ನು ನಿಭಾಯಿಸುವ ವಿಚಾರವನ್ನು ಬಿಟ್ಟು ಬಿಸಿಸಿಐ ಹತ್ತಿರ ಎಲ್ಲವೂ ಅಡಕವಾಗಿದೆ. ಹಾಗಾಗಿ ತಂಡದ ನಾಯಕರನ್ನು ಹೊರತುಪಡಿಸಿದ ತ್ರಿವಳಿ ಸದಸ್ಯರ ಸಮಿತಿಗೆ ಹೊಣೆಯನ್ನು ವಹಿಸಕೊಡಬೇಕಾಗಿದೆ. ಈ ಸಮಿತಿಯಲ್ಲಿ ರಾಷ್ಟ್ರೀಯ ಕೋಚ್, ಆಯ್ಕೆ ಸಮಿತಿ ಮುಖ್ಯಸ್ಥ ಹಾಗೂ ಇವೆಲ್ಲದರ ಹೊಣೆಯಿರುವ ನಿಷ್ಕೃಷ್ಟ ಯೋಜನೆ ರೂಪಿಸುವ ಸರಿಯಾದ ಪಥದತ್ತ ಚಲಿಸಲು ನೆರವಾಗುವ ಮೂಲಕ ತಮ್ಮ ಗುರಿ ಮುಟ್ಟುವಲ್ಲಿ ಸಹಾಯವಾಗುವ ಹಾಗೂ ಬಿಸಿಸಿಐ ಜತೆ ಸಂಪರ್ಕ ಕಲ್ಪಿಸುವ ವ್ಯಕ್ತಿಯ ಅಗತ್ಯವಿದೆ. ಈ ಕಾರ್ಯ ಯೋಜನೆಗೆ ಅನಿಲ್ ಕುಂಬ್ಳೆ ಅವರಿಗಿಂತ ಯೋಗ್ಯ ವ್ಯಕ್ತಿ ಮತ್ತೊಬ್ಬರಿಲ್ಲ ಎಂದು ಮಂಜ್ರೇಕರ್ ವಿವರಿಸಿದರು.

ಇಂಗ್ಲೆಂಡ್ ಸರಣಿಯನ್ನು ಹಗುರವಾಗಿ ಪರಿಗಣಿಸಿರುವುದೇ ತಂಡದ ಹೀನಾಯ ಸೋಲಿಗೆ ಕಾರಣವಾಗಿತ್ತು ಎಂದು ಮಂಜ್ರೇಕರ್ ತಿಳಿಸಿದರು. ಅಗ್ರಪಟ್ಟಕ್ಕಾಗಿನ ಹೋರಾಟದಲ್ಲಿ ಇಂಗ್ಲೆಂಡ್ ಸರಣಿಯು ಇಡಿ ವಿಶ್ವದ ಕೇಂದ್ರ ಬಿಂದುವಾಗಿತ್ತು. ಆದರೆ ಭಾರತ ಸಂಪೂರ್ಣ ವೈಫಲ್ಯವನ್ನು ಕಂಡಿತ್ತು. ಹೀಗಾಗಿ ಸಲಹೆ ಮಾಡಿದಂತೆ ಹೊಸ ಮ್ಯಾನೇಜ್‌ಮೆಂಟ್ ಸಮಿತಿಯು ಯಾವುದು ಮಹತ್ವದ ಸರಣಿ ಎಂಬುದನ್ನು ನಿಗದಿಪಡಿಸಿ ಅದಕ್ಕೆ ತಕ್ಕಂತೆ ಯೋಜನೆ ರೂಪಿಸಿಕೊಳ್ಳಬಹುದು. ಇದರಿಂದಾಗಿ ತಂಡದ ಪ್ರಮುಖ ಆಟಗಾರರು ಅಂತಹ ಪ್ರಮುಖ ಸರಣಿಗೆ ಲಭ್ಯರಾಗುತ್ತಾರೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬಹುದಾಗಿದೆ ಎಂದರು.

ಈ ನಡುವೆ ಫಿಟ್‌ನೆಸ್ ಸಮಸ್ಯೆಯು ಸಹ ಆಟಗಾರರ ಗುಣಮಟ್ಟದ ಮೇಲೆ ಪರಿಣಾಮ ಬೀರಿತ್ತು ಎಂಬುದನ್ನು ಮಂಜ್ರೇಕರ್ ಬೊಟ್ಟು ಮಾಡಿ ತೋರಿಸಿದರು. ನಿಮಗೆ ಭಾರತೀಯ ತಂಡವನ್ನು ಪ್ರತಿನಿಧಿಸಬೇಕಾದರೆ ಕೇವಲ ಕೌಶಲ್ಯ ಮಾತ್ರ ಸಾಕಾಗುವುದಿಲ್ಲ. ನೀವು ಅಂತರಾಷ್ಟ್ರೀಯ ಫಿಟ್‌ನೆಸ್ ಮಟ್ಟವನ್ನು ಕಾಯ್ದುಕೊಳ್ಳುವುದು ಸಹ ಅನಿವಾರ್ಯವಾಗಿದೆ. ಭಾರತವನ್ನು ಪ್ರತಿನಿಧಿಸಲು ಅಭಿಲಾಷೆ ಹೊಂದಿರುವವರಿಗೆ ಇದರಿಂದ ಸ್ಪಷ್ಟ ಸಂದೇಶ ರವಾನೆಯಾಗಬೇಕು ಎಂದವರು ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳಬೇಕಾದ ಮಹತ್ವದ ಕುರಿತಂತೆ ವಿವರಿಸಿದರು.

ಇಂಗ್ಲೆಂಡ್ ಸರಣಿಯಲ್ಲಿ 0-4 ಅಂತರದ ಮುಖಭಂಗಕ್ಕೊಳಗಾಗಿರುವ ಭಾರತ ಅಗ್ರಸ್ಥಾನ ಕಳೆದುಕೊಂಡಿದೆ. ಹೀಗಾಗಿ ಬಿಸಿಸಿಐ ಮುಂಚಿತವಾಗಿಯೇ ತಮ್ಮ ಗುರಿಯನ್ನು ಘೋಷಿಸಬೇಕಾಗಿದೆ. ಇದರಿಂದಾಗಿ ಸಹಜವಾಗಿಯೇ ತಳಭಾಗದಿಂದಲೇ ಭಾರತೀಯ ಕ್ರಿಕೆಟ್ ಜತೆ ನಂಟು ಹೊಂದಿದ ಎಲ್ಲರ ಮೇಲೂ ಒತ್ತಡ ಸೃಷ್ಟಿಯಾಗುತ್ತದೆ. ಇದು ಗುರಿ ಮುಟ್ಟುವಲ್ಲಿ ನೆರವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಟೆಸ್ಟ್ ಕ್ರಿಕೆಟನ್ನು ಹೆಚ್ಚು ಲಾಭದಾಯಕ ಮಾಡಬೇಕು ಎಂದವರು ಮಂಡಳಿಗೆ ಸಲಹೆ ಮಾಡಿದರು. ದೇಶದ ಬ್ರಾಂಡ್ ಮೌಲ್ಯ ಟೆಸ್ಟ್ ಕ್ರಿಕಟ್ ಆಗಿದೆ. ಆಟಗಾರರಿಗೆ ಹೆಚ್ಚಿನ ಸಂಭಾವನೆ ನೀಡುವ ಮೂಲಕವೂ ಟೆಸ್ಟ್ ಕ್ರಿಕೆಟನ್ನು ಪ್ರೋತ್ಸಾಹಿಸಬಹುದಾಗಿದೆ. ಇದರಿಂದಾಗಿ ಟ್ವೆಂಟಿ-20ನಲ್ಲಿ ಸುರೇಶ್ ರೈನಾ ಅವರು ಪಡೆಯುವ ಸಂಭಾವನೆಗಿಂತಲೂ ಹೆಚ್ಚು ದುಡ್ಡನ್ನು ಟೆಸ್ಟ್ ಕ್ರಿಕೆಟ್ ಆಡುವ ಮೂಲಕ ದ್ರಾವಿಡ್ ಪಡೆಯಬಹುದಾಗಿದೆ ಎಂದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ