ಭಾರತ 123ಕ್ಕೆ 1, ಗೆಲುವಿನ ಭರವಸೆ ಮೂಡಿಸಿದ ರೋಹಿತ್, ಕೊಹ್ಲಿ

ಗುರುವಾರ, 21 ನವೆಂಬರ್ 2013 (19:16 IST)
PR
PR
ಕೊಚ್ಚಿ: ವೆಸ್ಟ್ ಇಂಡೀಸ್ ಮತ್ತು ಭಾರತ ತಂಡದ ನಡುವೆ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ 212 ರನ್ ಚೇಸ್ ಮಾಡಿರುವ ಭಾರತದ ಪರ ಶಿಖರ್ ಧವನ್ ವಿಕೆಟ್‌ ಆರಂಭದಲ್ಲೇ ಕಳೆದುಕೊಂಡರೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಉತ್ತಮ ಜತೆಯಾಟದಿಂದ 123ಕ್ಕೆ 1 ವಿಕೆಟ್ ಕಳೆದುಕೊಂಡು ಆಡುತ್ತಿದ್ದು, ಗೆಲುವಿನ ಭರವಸೆ ಮೂಡಿಸಿದೆ. ರೋಹಿತ್ ಶರ್ಮಾ ತಮ್ಮ ಬಿರುಸಿನ ಹೊಡೆತಗಳ ಮೂಲಕ ಅಜೇಯ 65 ರನ್ ಬಾರಿಸಿದ್ದಾರೆ ಮತ್ತು ಕೊಹ್ಲಿ ಅಜೇಯ 45 ರನ್ ಗಳಿಸಿ ಆಡುತ್ತಿದ್ದಾರೆ. ರೋಹಿತ್ 65ರನ್‌ಗಳಲ್ಲಿ 8 ಬೌಂಡರಿಗಳು ಮತ್ತು ಒಂದು ಸಿಕ್ಸರ್‌ನಿಂದ ಕೂಡಿದೆ ಹಾಗೂ ಕೊಹ್ಲಿ 5 ಬೌಂಡರಿ ಗಳಿಸಿದ್ದಾರೆ.

ಇದಕ್ಕೆ ಮುನ್ನ ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್‌ ತಂಡವನ್ನು ಭಾರತದ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ ಮತ್ತು ಸುರೇಶ್ ರೈನಾ ಪರಿಸ್ಥಿತಿಯನ್ನು ಬಳಸಿಕೊಂಡು ಒಟ್ಟು 6 ವಿಕೆಟ್‌ಗಳನ್ನು ಇಬ್ಬರೂ ಹಂಚಿಕೊಂಡರು ಮತ್ತು ವೆಸ್ಟ್ ಇಂಡೀಸ್ ತಂಡವನ್ನು ಕೇವಲ 211ರನ್‌ಗಳಿಗೆ ಉರುಳಿಸಿದರು. ಜಡೇಜಾ 37 ರನ್ ನೀಡಿ 3 ವಿಕೆಟ್ ಕಬಳಿಸಿದ್ದರೆ, ರೈನಾ 34ಕ್ಕೆ 3 ರನ್ ಕಬಳಿಸಿದ್ದಾರೆ. ಅಶ್ವಿನ್ ಕೂಡ 42 ರನ್‌ಗೆ 2 ವಿಕೆಟ್ ಗಳಿಸಿದ್ದಾರೆ.

ವೆಸ್ಟ್ ಇಂಡೀಸ್ ಪರ ಬಿರುಸಿನ ಹೊಡೆತಗಳ ಆಟಗಾರ ಕ್ರಿಸ್ ಗೇಲ್ ಪಂದ್ಯದ ಮೊದಲ ಎಸೆತದಲ್ಲೇ ರನ್‌ಔಟ್‌ಗೆ ಬಲಿಯಾದರು. ಗೇಲ್ ಡೈವ್ ಮಾಡಲು ಹೋಗಿ ಗಾಯಗೊಂಡು ಸ್ಟ್ರೆಚರ್‌ನಲ್ಲಿ ಮೈದಾನದ ಹೊರಗೆ ತೆಗೆದುಕೊಂಡು ಹೋದರು.

ವೆಬ್ದುನಿಯಾವನ್ನು ಓದಿ