ಮಹಾನಾಮಾ, ಮದುಗಲೆ ರೆಫರಿಯಾಗಿ ನೇಮಕ

ಬುಧವಾರ, 31 ಅಕ್ಟೋಬರ್ 2007 (12:31 IST)
ಭಾರತ ಹಾಗೂ ಪಾಕಿಸ್ತಾನ ನಡುವಿನ ಮುಂಬರು ಏಕದಿನ ಕ್ರಿಕೆಟ್ ಸರಣಿಯಲ್ಲಿ ಶ್ರೀಲಂಕಾದ ರೋಷನ್ ಮಹಾನಾಮಾ ಅವರು ಮ್ಯಾಚ್ ರೆಫರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಟೆಸ್ಟ್ ಸರಣಿಗೆ ಶ್ರೀಲಂಕಾದವರೇ ಆದ ರಂಜನ್ ಮದುಗಲೆಯವರನ್ನು ರೆಫರಿಯಾಗಿ ನೇಮಿಸಲಾಗಿದೆ.

ಪಾಕಿಸ್ತಾನದ ವಿರುದ್ಧ ಏಕದಿನ ಸರಣಿ ನವ್ಹಂಬರ್ ಐದರಿಂದ ಪ್ರಾರಂಭವಾಗಲಿದ್ದು ಮೊದಲ ಮೂರು ಪಂದ್ಯಗಳಿಗೆ ಇಯಾನ್ ಗೋಲ್ಡ್ ಅಂಪೈರ್ ಆಗಿರುತ್ತಾರೆ. ಅವರು ಗುವಾಹಟಿ, ಕಾನ್ಪುರ್ ಹಾಗೂ ಮೊಹಾಲಿ ಪಂದ್ಯಗಳಲ್ಲಿ ಫೀಲ್ಡ್ ಅಂಪೈರ್ ಆಗಿರುತ್ತಾರೆ.

ನಂತರದ ಎರಡು ಏಕದಿನ ಪಂದ್ಯಗಳಲ್ಲಿ ಬಿಲಿ ಡಾಕ್ಟ್ರೋವ್ ಅವರು ಗ್ವಾಲಿಯರ್ ಮತ್ತು ಜೈಪುರ್ ಪಂದ್ಯಗಳಿಗೆ ಅಂಪೈರ್ ಆಗಿರುತ್ತಾರೆ. ಎರಡನೆ ಹಾಗೂ ಮೂರನೆ ಅಂಪೈರ್‌ಗಳನ್ನು ಬಿಸಿಸಿಐ ನೇಮಕ ಮಾಡಲಿದೆ.

ಟೆಸ್ಟ್ ಸರಣಿ ನವೆಂಬರ್ 22ರಂದು ಆರಂಭವಾಗಲಿದ್ದು ಸಿಮೋನ್ ಟಫೆಲ್, ಬಿಲಿ ಡಾಕ್ಟ್ರೋವ್ ಹಾಗೂ ಬಿಲಿ ಬೌಡೆನ್ ಅವರು ಅಂಪೈರ್‍ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

ಮೊದಲ ಟೆಸ್ಟ್ ನವದೆಹಲಿಯಲ್ಲಿ ನಡೆಯಲಿದ್ದು, ಸಿಮೋನ್ ಟಫೆಲ್ ಮತ್ತು ಬಿಲಿ ಡಾಕ್ಟ್ರೋವ್ ಫೀಲ್ಡ್ ಅಂಪೈರ್ ಆಗಿರುತ್ತಾರೆ. ಕೋಲ್ಕತ್ತದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಿಲಿ ಡಾಕ್ಟ್ರೋವ್ ಅವರೊಂದಿಗೆ ಬಿಲಿ ಬೌಡೆನ್ ಮೈದಾನದಲ್ಲಿ ಇರಲಿದ್ದಾರೆ.

ವೆಬ್ದುನಿಯಾವನ್ನು ಓದಿ