ಮುಂಬೈ ಇಂಡಿಯನ್ಸ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ಶುಭಾರಂಭ

ಗುರುವಾರ, 17 ಏಪ್ರಿಲ್ 2014 (15:59 IST)
PR
PR
ಜಾಕ್ವೆಸ್ ಕಾಲಿಸ್ ಮತ್ತು ಮನಿಷ್ ಪಾಂಡೆ ಅರ್ಧಶತಕಗಳಿಂದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಲಿ ಚಾಂಪಿಯನ್ನರಾದ ಮುಂಬೈ ಇಂಡಿಯನ್ಸ್ ತಂಡವನ್ನು 41 ರನ್‌ಗಳಿಂದ ಸೋಲಿಸುವ ಮೂಲಕ ಶುಭಾರಂಭ ಮಾಡಿದ್ದಾರೆ. ಅಬು ದಾಬಿಯ ಶೇಕ್ ಜಾಯೇದ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಐಪಿಎಲ್ 7ನೇ ಋತುವಿನ ಆರಂಭಿಕ ಪಂದ್ಯದಲ್ಲಿ 164 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಕೇವಲ 7 ವಿಕೆಟ್‌ಗೆ 122ರನ್ ಸ್ಕೋರ್ ಮಾಡುವುದಕ್ಕೆ ಮಾತ್ರ ಸಾಧ್ಯವಾಯಿತು.
ಆರಂಭಿಕಆಟಗಾರ ಆದಿತ್ಯ ತಾರೆ ಕೆಲವು ಆಕರ್ಷಕ ಹೊಡೆತಗಳನ್ನು ಬಾರಿಸಿದರು. ಅವರ ಜೊತೆಆಟಗಾರ ಮೈಕೇಲ್ ಹಸ್ಸಿ ವೆಸ್ಟ್ ಇಂಡೀಸ್ ನಿಗೂಢ ಸ್ಪಿನ್ನರ್ ಸುನಿಲ್ ನಾರಾಯಣ್ ಅವರಿಗೆ ಔಟಾದರು.

ಅಂಬಟಿ ರಾಯುಡು ತಾರೆ ಜೊತೆಗೂಡಿದರೂ ವೇಗದ ರನ್ ಬಾರಿಸುವಲ್ಲಿ ವಿಫಲರಾದರು. ರೋಹಿತ್ ಶರ್ಮಾ ಮತ್ತು ರಾಯುಡು 61 ರನ್ ಜೊತೆಯಾಟವಾಡಿದರೂ ಕ್ಯಾಲಿಸ್ ಹಿಡಿದ ಉತ್ತಮ ಕ್ಯಾಚ್‌ನಿಂದಾಗಿ ಮಾರ್ಕೆಲ್ ಬೌಲಿಂಗ್‌ನಲ್ಲಿ ರೋಹಿತ್ ಶರ್ಮಾ ಔಟಾದರು. ಮುಂದಿನ ಓವರಿನಲ್ಲಿ ನಾರಾಯಣ್ ರಾಯುಡು ವಿಕೆಟ್ ಪಡೆದು ಕೆಕೆಆರ್ ತಂಡ ಮೇಲುಗೈ ಸಾಧಿಸಿತು. ಕೆಕೆಆರ್ ಪರ ಜಾಕ್ವೆಸ್ ಕಾಲಿಸ್ 72 ರನ್ ಹೊಡೆದರು.

ವೆಬ್ದುನಿಯಾವನ್ನು ಓದಿ