ಮುಂಬೈ ಹೈಕೊರ್ಟ್ ತೀರ್ಪೂ: ಬಿಸಿಸಿಐ ಮುಖಭಂಗ

ಬುಧವಾರ, 31 ಜುಲೈ 2013 (18:44 IST)
PR
ಬಿಸಿಸಿಐ ನಿಯೋಜಿಸಿದ್ದ ದ್ವಿಸದಸ್ಯ ತನಿಖಾ ಆಯೋಗವು ಕಾನೂನು ಬಾಹಿರ ಮತ್ತು ಅಸಂವಿಧಾನಿಕ ಎಂದು ಮುಂಬಯಿ ಹೈಕೋರ್ಟ್ ಹೆಳಿದೆ. ಇದರಿಂದ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್‌ ಮರಳಿ ಬಿಸಿಸಿಐ ಗೆ ಬರುವ ಕನಸಿಗೆ ಮತ್ತೆ ಹೊಡೆತ ಬಿದ್ದಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ಟ್ವೆಂಟಿ-20 ಟೂರ್ನಿಯಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರಿನಿವಾಸನ್ ಅವರ ಅಳಿಯ ಗುರುನಾಥ ಹಾಗು ರಾಜಸ್ಥಾನ್ ರಾಯಲ್ಸ್ ತಂಡದ ಸಹ ಮಾಲೀಕ ರಾಜ ಕುಂದ್ರಾ ಅವರಿಗೆ ಬಿಸಿಸಿಐ ಕ್ಲೀನ್ ಚೀಟ್ ನೀಡಿದ ಕಾರಣ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್‌ ಮರಳಿ ಬಿಸಿಸಿಐಗೆ ಬರುವ ಚಿಂತನೆಯಲ್ಲಿ ಇದ್ದರು. ಆದರೆ ಮುಂಬೈ ಹೈಕೊರ್ಟ್ ತೀರ್ಫಿನಿಂದ ಶ್ರಿನಿವಾಸನ್ ಅವರಿಗೆ ಮತ್ತೆ ಕಂಟಕ ಎದುರಾಗಲಿದೆ.

ಬಿಸಿಸಿಐ ರಚಿಸಿದ ತನಿಖಾ ಆಯೊಗ ಕಾನೂನು ಬಾಹಿರ ಮತ್ತು ಅಸಂವಿಧಾನಿಕ ಆದ ಕಾರಣ,
ಮುಖ್ಯವಾಗಿ ತನಿಖಾ ಆಯೊಗ ರಚಿಸಿರುವುದೆ ತಪ್ಪು ಎಂದು ಮುಂಬೈ ಹೈಕೊರ್ಟ್ ಹೆಳಿದೆ. ಇದರಿಂದ ಬಿಸಿಸಿಐಗೆ ಮತ್ತೆ ತಿವ್ರ ಮುಖಭಂಗವಾಗಿದೆ .

ವೆಬ್ದುನಿಯಾವನ್ನು ಓದಿ