ಯುವಿಯನ್ನು ಮಿಸ್ ಮಾಡಿಕೊಳ್ಳುತ್ತಿರುವ ಕಾಪ್ಟನ್ ಧೋನಿ

ಶುಕ್ರವಾರ, 2 ಸೆಪ್ಟಂಬರ್ 2011 (18:24 IST)
ಅಂಗಣದ ಹೊರಗಡೆ ಅವರಿಬ್ಬರು ಜಾಲಿ ಫ್ರೆಂಡ್ಸ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಮೈದಾನದಲ್ಲೂ ಯುವರಾಜ್ ಸಿಂಗ್ ಸೇವೆಯಿಂದ ವಂಚಿತರಾಗಿರುವ ನಾಯಕ ಮಹೇಂದ್ರ ಸಿಂಗ್ ಧೋನಿ, ಈ ಪಂಜಾಬ್ ಆಟಗಾರರನ್ನು ಸಾಕಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸಾಧಾರಣವಾಗಿ ಅರೆ ಕಾಲಿಕ ಸ್ಪಿನ್ ಬೌಲರ್ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲ ಸಾಮರ್ಥ್ಯವನ್ನು ಹೊಂದಿರುವ ಯುವಿ ಅವರನ್ನು ಧೋನಿ ಐದನೇ ಬೌಲರ್ ಆಗಿ ಬಳಸಿಕೊಳ್ಳುತ್ತಾರೆ. ಆದರೆ ಪ್ರಸ್ತುತ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಪಂಜಾಬ್ ಎಡಗೈ ಆಟಗಾರ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಅಲಭ್ಯರಾಗಿದ್ದಾರೆ. ಇದು ಧೋನಿ ಅವರನ್ನು ಗಾಢವಾಗಿ ಕಾಡುತ್ತಿದೆ.

ಏಕೈಕ ಟ್ವೆಂಟಿ-20 ಪಂದ್ಯದ ಸಂದರ್ಭದಲ್ಲೂ ಯುವಿ ಅನುಪಸ್ಥಿತಿ ಧೋನಿಗೆ ಕಾಡುತ್ತಿತ್ತಂತೆ. ಆದರೆ ಯುವಿ ಸೇವೆಗೆ ಲಭ್ಯವಾಗಿಲ್ಲದಿದ್ದುರಿಂದ ಖಾಯಂ ಬೌಲರ್ ಆಗಿರದ ಹೊರತಾಗಿಯೂ ವಿರಾಟ್ ಕೊಹ್ಲಿ ಕೈಗೆ ಚೆಂಡನ್ನು ನೀಡಲಾಗಿತ್ತು.

ಇತ್ತೀಚೆಗಷ್ಟೇ ಭಾರತದ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಯುವಿ ಪಾತ್ರ ಮಹತ್ವದ್ದಾಗಿತ್ತು. ಆಲ್‌ರೌಂಡರ್ ಸ್ಥಾನವನ್ನು ಸಮರ್ಥವಾಗಿ ತುಂಬಿಕೊಂಡಿದ್ದ ಯುವಿ ಆರ್ಹವಾಗಿಯೇ ಸರಣಿಶ್ರೇಷ್ಠ ಗೌರವಕ್ಕೂ ಪಾತ್ರರಾಗಿದ್ದರು. ಬೌಲಿಂಗ್‌ನಲ್ಲಿ ಅಮೋಘ ದಾಳಿ ಸಂಘಟಿಸಿದ್ದ ಯುವರಾಜ್ ನಿಕಟ ಪರಿಸ್ಥಿತಿಯಲ್ಲಿ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.

ಇದರಿಂದಾಗಿಯೇ ಗೌತಮ್ ಗಂಭೀರ್ ಅಲಭ್ಯರಾದಾಗ ರವೀಂದ್ರ ಜಡೇಜಾ ಅವರಿಗೆ ಬುಲಾವ್ ನೀಡಲಾಗಿತ್ತು ಎಂಬ ವಾದ ಸಹ ಕೇಳಿಬರುತ್ತಿವೆ. ನಾವು ಆರು ಬ್ಯಾಟ್ಸ್‌ಮನ್ ಹಾಗೂ ಐವರು ಬೌಲರುಗಳ ಯೋಜನೆಯೊಂದಿಗೆ ಆಡುವಂತಿಲ್ಲ. ಹೀಗಾಗಿ ತಂಡದಲ್ಲಿ ಆಲ್‌ರೌಂಡರ್ ಆಟಗಾರನ ಸಾನಿಧ್ಯ ಅಗತ್ಯವಾಗಿದೆ ಎಂದು ಧೋನಿ ತಿಳಿಸಿದ್ದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ