ರಣಜಿ ಕ್ರಿಕೆಟ್‌: ಎ ಗುಂಪಿನಲ್ಲಿ ಮುಂಬೈ, ದೆಹಲಿ

ಮಂಗಳವಾರ, 6 ಮೇ 2008 (12:33 IST)
ಹಾಲಿ ಚಾಂಪಿಯನ್ ದೆಹಲಿ ಮತ್ತು 37 ಬಾರಿ ರಣಜಿ ಚಾಂಪಿಯನ್ ಪ್ರಶಸ್ತಿ ಪಡೆದಿರುವ ಮುಂಬೈ ತಂಡವು ರಣಜಿ ಚಾಂಪಿಯನ್‌ಷಿಪ್‌ನ ಎಲೈಟ್ ವಿಭಾಗದಲ್ಲಿ ಎ ಗುಂಪಿನಲ್ಲಿ ಸ್ಥಾನ ಪಡೆದಿವೆ.

2008-09ರ ದೇಶಿ ಕ್ರಿಕೆಟ್ ಪಂದ್ಯಾವಳಿಯ ಕಾರ್ಯಕ್ರಮ ಪಟ್ಟಿಯನ್ನು ಬಿಡುಗಡೆ ಮಾಡಿದ ಮಂಡಳಿಯ ಕಾರ್ಯದರ್ಶಿ ನಿರಂಜನ್ ಷಾ ಅವರು 200708ರಲ್ಲಿ ಪ್ಲೇಟ್ ವಿಭಾಗದಲ್ಲಿ ಫೈನಲ್ ತಲುಪಿದ ಗುಜರಾತ್ ಮತ್ತು ರೈಲ್ವೆಸ್ ತಂಡಗಳಿಗೆ ಎಲೈಟ್ ಗುಂಪಿನಲ್ಲಿ ಬಡ್ತಿ ನೀಡುವ ಮೂಲಕ ಸ್ಥಾನ ಕಲ್ಪಿಸಲಾಗಿದೆ. ಬಂಗಾಳ ಮತ್ತು ಹಿಮಾಚಲ ಪ್ರದೇಶ ತಂಡಗಳಿಗೆ ಎಲೈಟ್ ಗುಂಪಿನಿಂದ ಹಿಂಬಡ್ತಿ ನೀಡಲಾಗಿದ್ದು, ಎರಡು ತಂಡಗಳು ಪ್ಲೇಟ್ ವಿಭಾಗದಲ್ಲಿ ಸೆಣಸಲಿವೆ ಎಂದು ಅವರು ಮಾಹಿತಿ ನೀಡಿದರು.
ಎಲೈಟ್ ವಿಭಾಗ:
ಎ ಗುಂಪು:
ದೆಹಲಿ ಸೌರಾಷ್ಟ್ರ, ಮುಂಬೈ, ಒರಿಸ್ಸಾ, ಪಂಜಾಬ್, ಹೈದರಾಬಾದ್, ರಾಜಸ್ತಾನ್, ಮತ್ತು ಗುಜರಾತ್

ಬಿ ಗುಂಪು: ಉತ್ತರ ಪ್ರದೇಶ, ಬರೋಡಾ, ಆಂಧ್ರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಮತ್ತು ರೈಲ್ವೆಸ್.

ಪ್ಲೇಟ್ ವಿಭಾಗ
ಎ ಗುಂಪು: ಕೇರಳ, ಹರಿಯಾಣಾ, ಹಿಮಾಚಲ ಪ್ರದೇಶ, ಗೋವಾ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್

ಬಿ ಗುಂಪು: ಮಧ್ಯ ಪ್ರದೇಶ, ಆಸ್ಸಾಮ್, ಬಂಗಾಳ, ವಿಧರ್ಭ, ಸರ್ವೀಸಸ್, ತ್ರಿಪುರಾ.

ವೆಬ್ದುನಿಯಾವನ್ನು ಓದಿ