ಲಂಕಾ ವಿಶ್ವಕಪ್ ತಂಡದಲ್ಲಿಲ್ಲ ಜಯಸೂರ್ಯ, ವಾಸ್

ಭಾನುವಾರ, 9 ಜನವರಿ 2011 (09:02 IST)
1996ರ ವಿಶ್ವಕಪ್ ವಿಜೇತ ಶ್ರೀಲಂಕಾ ತಂಡದ ಸದಸ್ಯರಾಗಿದ್ದ ಸನತ್ ಜಯಸೂರ್ಯ ಮತ್ತು ಚಾಮಿಂಡಾ ವಾಸ್ ಈ ಬಾರಿಯ ವಿಶ್ವಕಪ್‌ಗಾಗಿನ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ.

ಪ್ರತಿಷ್ಠಿತ ವಿಶ್ವಕಪ್‌ಗೆ ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ರಾಷ್ಟ್ರಗಳು ಜಂಟಿಯಾಗಿ ಆತಿಥ್ಯ ವಹಿಸುತ್ತಿವೆ. ಇದರಂತೆ 15 ಮಂದಿ ಸದಸ್ಯರ ತಂಡವನ್ನು ಲಂಕಾ ಪ್ರಕಟಿಸಿದೆ.

1996ರ ವಿಶ್ವಕಪ್ ಗೆಲುವಿನಲ್ಲಿ ಜಯಸೂರ್ಯ ಮತ್ತು ವಾಸ್ ಪ್ರಮುಖ ಪಾತ್ರ ವಹಿಸಿದ್ದರು. ಹಾಗೆಯೇ ಈ ಬಾರಿಯ ಸಂಭವನೀಯರ ಪಟ್ಟಿಯಲ್ಲೂ ಕಾಣಿಸಿಕೊಂಡಿದ್ದರು. ಆದರೆ ಅಂತಿಮ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

1996ರ ವಿಶ್ವಕಪ್ ತಂಡದಲ್ಲಿದ್ದ ಮತ್ತೊಬ್ಬ ಬೌಲರ್ ಮುತ್ತಯ್ಯ ಮುರಳೀಧನರ್ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ ಅಚ್ಚರಿಯೆಂಬಂತೆ ಸೂರಜ್ ರಣಧೀವ್ ಸ್ಥಾನಕ್ಕೆ ರಂಗನಾ ಹೇರಾತ್ ಆಯ್ಕೆಯಾಗಿದ್ದಾರೆ.

ತಂಡ ಇಂತಿದೆ:
ಕುಮಾರ ಸಂಗಕ್ಕರ (ನಾಯಕ), ಮಹೇಲಾ ಜಯವರ್ಧನೆ, ಉಪುಲ್ ತರಂಗ, ತಿಲಕರತ್ನೆ ದಿಲ್‌ಶಾನ್, ತಿಲನ್ ಸಮರವೀರ, ಚಮರ ಸಿಲ್ವಾ, ಚಮರ ಕಪುಗೇಡರಾ, ಆಂಗಲೋ ಮ್ಯಾಥ್ಯೂಸ್, ತಿಸಾರಾ ಪರೇರಾ, ನುವಾನ್ ಕುಲಶೇಖರ, ಲಸಿತ್ ಮಾಲಿಂಗ, ದಿಲ್ಹಾರಾ ಫೆರ್ನಾಂಡೊ, ಮುತ್ತಯ್ಯ ಮುರಳೀಧರನ್, ಅಜಂತಾ ಮೆಂಡೀಸ್ ಮತ್ತು ರಂಗನಾ ಹೇರಾತ್.

ವೆಬ್ದುನಿಯಾವನ್ನು ಓದಿ