ವರ್ಲ್ಡ್‌ಕಪ್ ಹೀರೊ ಯುವ'ರಾಜ'ನಿಗೆ ಬಡ್ತಿ; ಭಜ್ಜಿ ಬಚಾವ್..!

ಶನಿವಾರ, 29 ಅಕ್ಟೋಬರ್ 2011 (18:10 IST)
WD

2011-12ನೇ ಸಾಲಿನ ಪ್ರಧಾನ ಗುತ್ತಿಗೆ ಒಪ್ಪಂದವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯಕಾರಿಣಿ ಸಮಿತಿ ಘೋಷಿಸಿದ್ದು, ಇತ್ತೀಚೆಗಷ್ಟೇ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರಿಗೆ 'ಎ' ದರ್ಜೆಗೆ ಬಡ್ತಿ ನೀಡಲಾಗಿದೆ.

ಅದೇ ಹೊತ್ತಿಗೆ ಇತ್ತೀಚೆಗಿನ ಕಳಪೆ ಫಾರ್ಮ್‌ನ ಹೊರತಾಗಿಯೂ 'ಎ' ಶ್ರೇಣಿ ಉಳಿಸಿಕೊಳ್ಳುವಲ್ಲಿ ಪಂಜಾಬ್ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಯಶಸ್ವಿಯಾಗಿದ್ದಾರೆ. ಹರಭಜನ್ ಕೌಶಲ್ಯದಲ್ಲಿ ಭರವಸೆ ತೋರಿರುವುದೇ ಮಂಡಳಿ ಹಿಂಬಡ್ತಿ ನೀಡದಿರಲು ಕಾರಣವಾಗಿದೆ.

ಕಳೆದ ವರ್ಷ 'ಎ' ಗ್ರೇಡ್‌ನಲ್ಲಿದ್ದ ಯುವಿ ಅವರನ್ನು 'ಬಿ' ದರ್ಜೆಗೆ ಹಿಂಬಡ್ತಿ ನೀಡಲಾಗಿತ್ತು. ಆದರೆ ಕಳೆದೊಂದು ವರ್ಷದಲ್ಲಿ ಅಮೋಘ ನಿರ್ವಹಣೆ ನೀಡಿರುವ ಯುವಿ 28 ವರ್ಷಗಳ ನಂತರ ಭಾರತ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ವಿಶ್ವಕಪ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ್ದ ಯುವಿ ಸರಣಿ ಪುರಷೋತ್ತಮನಾಗಿ ಹೊರಹೊಮ್ಮಿದ್ದರು.

ಕೊಹ್ಲಿಗೆ ಬಂಪರ್...
ಮತ್ತೊಂದೆಡೆ ಭವಿಷ್ಯದ ನಾಯಕ ಎಂದೇ ಬಿಂಬಿತವಾಗಿರುವ ಉದನೋನ್ಮುಖ ಪ್ರತಿಭೆ ವಿರಾಟ್ ಕೊಹ್ಲಿ ಅವರಿಗೆ ಬಂಪರ್ ಲಭಿಸಿದ್ದು, ಪ್ರಧಾನ ಗುತ್ತಿಗೆ ಒಪ್ಪಂದದ 'ಎ' ಶ್ರೇಣಿಯಲ್ಲಿ ಕಾಣಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಪಂದ್ಯದಿಂದ ಪಂದ್ಯಕ್ಕೂ ಅಮೋಘ ನಿರ್ವಹಣೆಯನ್ನೇ ನೀಡುತ್ತಿರುವ ಕೊಹ್ಲಿ ಪ್ರತಿಭೆಯನ್ನು ಮಂಡಳಿ ಗುರುತಿಸಿಕೊಂಡತಾಂಗಿದೆ.

ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ನಲ್ಲಿ 100 ವಿಕೆಟುಗಳ ಸಾಧನೆ ಮಾಡಿದ್ದ ಇಶಾಂತ್ ಶರ್ಮಾ ಸಹ ಅಗ್ರ ಶ್ರೇಣಿಗೆ ಬಡ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಸಿಸಿಐ ಗುತ್ತಿಗೆ ಒಪ್ಪಂದದಂತೆ 'ಎ' ದರ್ಜೆಯ ಆಟಗಾರರು ವಾರ್ಷಿಕವಾಗಿ 1 ಕೋಟಿ ಹಾಗೂ 'ಬಿ' ಹಾಗೂ 'ಸಿ' ದರ್ಜೆಯ ಆಟಗಾರರು ಅನುಕ್ರಮವಾಗಿ 50 ಲಕ್ಷ ಹಾಗೂ 25 ಲಕ್ಷ ಸಂಭಾವನೆಯನ್ನು ಪಡೆಯಲಿದ್ದಾರೆ

PTI

ಎ ಗ್ರೇಡ್ (ಒಂದು ಕೋಟಿ)
ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ಮಹೇಂದ್ರ ಸಿಂಗ್ ಧೋನಿ, ವಿವಿಎಸ್ ಲಕ್ಷ್ಮಣ್, ಸುರೇಶ್ ರೈನಾ, ಹರಭಜನ್ ಸಿಂಗ್, ಜಹೀರ್ ಖಾನ್, ಯುವರಾಜ್ ಸಿಂಗ್, ಇಶಾಂತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ

ಬಿ ಗ್ರೇಡ್ (50 ಲಕ್ಷ)
ಪ್ರವೀಣ್ ಕುಮಾರ್, ಪ್ರಗ್ಯಾನ್ ಓಜಾ, ಆರ್. ಅಶ್ವಿನ್, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ

ಸಿ ಗ್ರೇಡ್ (25 ಲಕ್ಷ)
ಎಸ್. ಶ್ರೀಶಾಂತ್, ಅಮಿತ್ ಮಿಶ್ರಾ, ಚೇತೇಶ್ವರ ಪೂಜಾರ, ಅಭಿಮನ್ಯು ಮಿಥುನ್, ವಿನಯ್ ಕುಮಾರ್, ಅಜಿಂಕ್ಯಾ ರಹಾನೆ, ಮುನಾಫ್ ಪಟೇಲ್, ಮುರಳಿ ವಿಜಯ್, ಶಿಖರ್ ಧವನ್, ವೃದ್ದೀಮಾನ್ ಸಹಾ, ಪಾರ್ಥಿವ್ ಪಟೇಲ್, ಸುಬ್ರಹ್ಮಣ್ಯಂ ಬದ್ರೀನಾಥ್, ಮನೋಜ್ ತಿವಾರಿ, ಪಿಯೂಷ್ ಚಾವ್ಲಾ, ದಿನೇಶ್ ಕಾರ್ತಿಕ್, ಜೈದೇವ್ ಉನಾದ್ಕಟ್, ಉಮೇಶ್ ಯಾದವ್, ರಾಹುಲ್ ಶರ್ಮಾ ಮತ್ತು ವರುಣ್ ಆರೋನ್.

ವೆಬ್ದುನಿಯಾವನ್ನು ಓದಿ