ಶತಕ ವಂಚಿತರಾದ ಶಿಖರ್ ಧವನ್, ಶ್ರೀಲಂಕಾ ಗೆ 265 ರನ್ ಗಳ ಗುರಿ ನೀಡಿದ ಭಾರತ

ಶುಕ್ರವಾರ, 28 ಫೆಬ್ರವರಿ 2014 (18:08 IST)
PTI
ಏಷ್ಯಾ ಕಪ್ ನ ಎರಡನೇ ದಿನದಾಟದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 264 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

ಶಿಖರ್ ಧವನ್ (94) ಮತ್ತು ನಾಯಕ ವಿರಾಟ್ ಕೊಹ್ಲಿ (48) ಭಾರತೀಯ ಇನ್ನಿಂಗ್ಸ್ ಗೆ ಹೆಚ್ಚಿನ ಕೊಡುಗೆ ನೀಡಿದರು. 49 ನೇ ಓವರ್ ನಲ್ಲಿ ಮೆಂಡಿಸ್ ಎಸೆತದಲ್ಲಿ 2 ಸಿಕ್ಸರ್ ಸಿಡಿಸಿದ ಶಮಿ 264 ರನ್ ತಲುಪಲು ಕಾರಣರಾದರು. ಈ ರೀತಿಯಲ್ಲಿ ಭಾರತ ಲಂಕನ್ನರಿಗೆ 265 ರನ್ ಗಳ ಗುರಿಯನ್ನು ನೀಡಿತು.

ಶ್ರೀಲಂಕಾದ ಪರ ಅಜಂತಾ ಮೆಂಡಿಸ್ ನಾಲ್ಕು, ಸೇನಾನಾಯಕೆ ಮೂರು ಮತ್ತು . ಚತುರಂಗ ಸಿಲ್ವಾ, ಲಸಿತ್ ಮಾಲಿಂಗ ತಲಾ ಒಂದು ವಿಕೆಟ್ ಪಡೆದರು.

ವೆಬ್ದುನಿಯಾವನ್ನು ಓದಿ