ಶಮಿ ಬೌಲಿಂಗ್‌ಗೆ ಇಸ್ಪೀಟೆಲೆಯಂತೆ ಉರುಳಿದ ವೆಸ್ಟ್‌ಇಂಡೀಸ್

ಬುಧವಾರ, 6 ನವೆಂಬರ್ 2013 (16:43 IST)
PR
PR
ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ದಿನದಾಟದಲ್ಲಿ ಭಾರತ ಯಾವ ವಿಕೆಟ್ ಕಳೆದುಕೊಳ್ಳದೇ 37 ರನ್ ಗಳಿಸಿದ್ದು, ಶಿಖರ್ ಧವನ್(21 ನಾಟೌಟ್) ಮತ್ತು ಮುರುಳಿ ವಿಜಯ್(16 ನಾಟೌಟ್) ಗಳಿಸಿದ್ದಾರೆ. ಇದಕ್ಕೆ ಮೊದಲು ಬ್ಯಾಟಿಂಗ್‌ಗೆ ಇಳಿದ ವೆಸ್ಟ್ ಇಂಡೀಸ್ ಮೊಹಮ್ಮದ್ ಶಮಿ ಬೌಲಿಂಗ್ ದಾಳಿಗೆ ತರಗೆಲೆಗಳಂತೆ ಉರುಳಿದರು.ಐದು ದಿನಗಳ ಟೆಸ್ಟ್ ಆಟದ ಸ್ವರೂಪದಲ್ಲಿ ಶಮಿ ಚೊಚ್ಚಲ ಪ್ರವೇಶದಲ್ಲೇ ಮಹತ್ವದ ಸಾಧನೆ ಮಾಡಿದ್ದು, ನಾಲ್ಕು ವಿಕೆಟ್ ಕಬಳಿಸಿದ್ದಾರೆ ಮತ್ತು ಭಾರತವನ್ನು ಮೇಲುಗೈ ಸ್ಥಿತಿಯಲ್ಲಿ ಇರಿಸಿದ್ದಾರೆ. ಶಮಿ ಶೆಲ್ಡ್ರಾನ್ ಕಾಟ್ಟೆರಾಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದಾಗ ನಾಲ್ಕನೇ ವಿಕೆಟ್ ಗಳಿಸಿದ್ದರು.

ರವಿಚಂದ್ರನ್ ಅಶ್ವಿನ್ ಚಂದ್ರಪಾಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ವೆಸ್ಟ್‌ಇಂಡೀಸ್ ತಂಡವನ್ನು 9 ವಿಕೆಟ್‌ಗೆ 233 ರನ್‌ಗೆ ಔಟ್ ಮಾಡಿದ್ದರು.ಎರಡನೇ ಸೆಷನ್‌ನಲ್ಲಿ ಕೊನೆಯ ಓವರ್ ಬೌಲ್ ಮಾಡಿದ ಸಚಿನ್ ತೆಂಡೂಲ್ಕರ್ ಶೇನ್ ಶಿಲಿಂಗ್‌ಫೋರ್ಡ್ ಅವರಿಗೆ ನೇರ ಎಸೆತವನ್ನು ಬೌಲ್ ಮಾಡಿ ಎಲ್‌ಬಿಗೆ ಔಟ್ ಮಾಡಿದ್ದರಿಂದ ವೆಸ್ಟ್ ಇಂಡೀಸ್ ಟೀ ವೇಳೆಗೆ 7 ವಿಕೆಟ್‌ ಕಳೆದುಕೊಂಡು 192 ರನ್ ಗಳಿಸಿತ್ತು.

ವೆಬ್ದುನಿಯಾವನ್ನು ಓದಿ