ಶಾಲಾ ಕ್ರಿಕೆಟ್‌ನಲ್ಲಿ 546 ರನ್ ಬಾರಿಸಿದ ಬಾಲ ಪ್ರತಿಭೆ ಪ್ರಥ್ವಿ ಶಾಹ್

ಬುಧವಾರ, 20 ನವೆಂಬರ್ 2013 (16:44 IST)
PR
PR
ಮುಂಬೈ: ಇವನು ಮುಂಬೈನ ಬಾಲ ಬ್ಯಾಟಿಂಗ್ ಪ್ರತಿಭೆ 15 ವರ್ಷ ವಯಸ್ಸಿನ ಪ್ರಥ್ವಿ ಶಾಹ್. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ರೀತಿಯಲ್ಲಿ ಕ್ರಿಕೆಟ್ ದಾಖಲೆಗಳನ್ನು ಮುರಿಯುವ ಹುಮ್ಮಸ್ಸು ತೋರಿದ್ದಾನೆ. ಇವನು ಸಚಿನ್ ಸ್ಥಾನವನ್ನು ಭವಿಷ್ಯದಲ್ಲಿ ಅಲಂಕರಿಸುತ್ತಾನೆಯೇ ಎಂಬ ಕುತೂಹಲವೂ ಮೂಡಿದೆ. ಬುಧವಾರ ಹ್ಯಾರಿಸ್ ಷೀಲ್ಡ್ ಪಂದ್ಯದಲ್ಲಿ 546 ರನ್‌ಗಳನ್ನು ಬಾರಿಸುವ ಮೂಲಕ ಇತಿಹಾಸದ ಪುಟಗಳಲ್ಲಿ ಸೇರಿದ್ದಾನೆ. ಅವನ ಶಾಲೆ ರಿಜ್ವಿ ಸ್ಪ್ರಿಂಗ್‌ಫೀಲ್ಡ್ ಮತ್ತು ಸೇಂಟ್ ಫ್ರಾನ್ಸಿಸ್ ಡಿ. ಅಸ್ಸಿಸಿ ಶಾಲೆಯ ನಡುವೆ ಪಂದ್ಯದಲ್ಲಿ ಶಾಲಾ ಕ್ರಿಕೆಟ್‌‍ನಲ್ಲಿ 500+ ಸ್ಕೋರನ್ನು ಪ್ರಥಮ ಬಾರಿಗೆ ಹೊಡೆದ.ಭಾರತೀಯನೊಬ್ಬ ಯಾವುದೇ ಕ್ರಿಕೆಟ್‌ನಲ್ಲಿ ಗಳಿಸಿದ ಅತ್ಯಧಿಕ ಸ್ಕೋರು 515.

ಅದೂ ಬಹಳ ವರ್ಷಗಳ ಹಿಂದೆ ಅಂದರೆ 1933/34ರಲ್ಲಿ ದಾದಾಬಾಯಿ ಹವೇವಾಲಾ ಎಂಬ ಬಾಲಕ ಬಿಬಿ ಅಂಡ್ ಸಿಐ ರೈಲ್ವೆ ವಿರುದ್ಧ ಸೇಂಟ್ ಕ್ಸೇವಿಯರ್ ಕಾಲೇಜಿನ ಪಂದ್ಯದಲ್ಲಿ ದಾಖಲಿಸಿದ್ದ.ಆದರೆ ಫ್ರಥ್ವಿ ಶಾಹ್ 546 ರನ್ ಸಿಡಿಸುವ ಮೂಲಕ ಈ ದಾಖಲೆ ಮುರಿದಿದ್ದಾನೆ.

ವೆಬ್ದುನಿಯಾವನ್ನು ಓದಿ