ಸಚಿನ್‌ಗೆ ಪದ್ಮವಿಭೂಷಣ ಪ್ರಶಸ್ತಿ

ಮಂಗಳವಾರ, 6 ಮೇ 2008 (11:22 IST)
ಸಚಿನ್ ತೆಂಡುಲ್ಕರ್ ಪಾಲಿಗೆ ಗೌರವ ಪ್ರಶಸ್ತಿಗಳು ಹೊಸತಲ್ಲ. ಇಂದು ರಾಷ್ಟ್ರಪತಿ ಪ್ರತಿಭಾದೇವಿ ಪಾಟೀಲ್ ಅವರಿಂದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರು ಪದ್ಮವಿಭೂಷಣ ಪ್ರಶಸ್ತಿಯನ್ನು ಪಡೆದರು. ಭಾರತ ಸರಕಾರ ನೀಡುವ ಕೆಲವೇ ಕೆಲವು ಅತ್ತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾಗಿರುವ ಪದ್ಮವಿಭೂಷಣ ಪ್ರಶಸ್ತಿ ತಮಗೆ ಸಂದ ಕುರಿತು ಮಾತನಾಡಿದ ಸಚಿನ್ ತೆಂಡುಲ್ಕರ್ ಖುಷಿಯನ್ನು ಹೇಗೆ ವ್ಯಕ್ತಪಡಿಸುವುದು ಎಂದು ತಿಳಿಯುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಕಳೆದ 18 ವರ್ಷಗಳ ಅವಧಿಯಲ್ಲಿ ನಾನು ಸಾಕಷ್ಟು ಪ್ರಶಸ್ತಿ ಗೌರವಗಳನ್ನು ಸರಕಾರದಿಂದ ಸರಕಾರೇತರ ಸಂಸ್ಥೆಗಳಿಂದ ಪಡೆದಿದ್ದೇನೆ. ಪದ್ಮವಿಭೂಷಣ ಪ್ರಶಸ್ತಿಯನ್ನು ನನಗೆ ಕೊಡ ಮಾಡುವ ಮೂಲಕ ಸರಕಾರ ನನ್ನ ಸಾಧನೆಯನ್ನು ಗುರುತಿಸಿದೆ.

ರಾಷ್ಟ್ರಪತಿ ಭವನದಲ್ಲಿ ಜರುಗಿದ ಪ್ರಶಸ್ತಿ ಪ್ರಧಾನ ಸಮಾರಂಭದ ಸಂದರ್ಭದಲ್ಲಿ ಸಚಿನ್ ತೆಂಡುಲ್ಕರ್ ಅವರೊಂದಿಗೆ ಆಗಮಿಸಿದ್ದ ಪತ್ನಿ ಅಂಜಲಿ ಅವರು "ಸಚಿನ್ ಬಗ್ಗೆ ನನಗೆ ಹೆಮ್ಮೆಯಾಗುತ್ತದೆ. ಸಚಿನ್ ಯಾವಾಗಲೂ ಕ್ರಿಕೆಟ್ ಆಡುವುದು ಹೃದಯದಿಂದ ಹೀಗಾಗಿ ಪ್ರಶಸ್ತಿ, ಗೌರವಗಳು ಸಚಿನ್ ಆಟಕ್ಕೆ ಬೇಕಿಲ್ಲ. ಇದೇ ಸಂದರ್ಭದಲ್ಲಿ ಈಜು ಪಟು ಬುಲಾ ಚೌದರಿ ಚಕ್ರವರ್ತಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು.

ವೆಬ್ದುನಿಯಾವನ್ನು ಓದಿ