ಸಚಿನ್‌ಗೆ ವಿಶ್ರಾಂತಿ, ಭಜ್ಜಿಗೆ ಕೊಕ್: ಅರವಿಂದ್, ವಿನಯ್‌ಗೆ ಸ್ಥಾನ

ಗುರುವಾರ, 29 ಸೆಪ್ಟಂಬರ್ 2011 (15:29 IST)
PR
ಮುಂಬರುವ ತವರಿನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಿಗಾಗಿನ ಟೀಮ್ ಇಂಡಿಯಾವನ್ನು ಘೋಷಿಸಲಾಗಿದ್ದು, ಕರ್ನಾಟಕದ ಎಸ್. ಅರವಿಂದ್ ಹಾಗೂ ವಿನಯ್ ಕುಮಾರ್ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಗಾಯದಿಂದ ಪೂರ್ಣವಾಗಿ ಚೇತರಿಸಿಕೊಳ್ಳದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ರೋಹಿತ್ ಶರ್ಮಾ ಹಾಗೂ ಜಹೀರ್ ಖಾನ್ ಅವರಿಗೆ ವಿಶ್ರಾಂತಿ ಘೋಷಿಸಲಾಗಿದೆ. ಇದೇ ಸಂದರ್ಭದಲ್ಲಿ ಸಂಪೂರ್ಣ ಫಿಟ್‌ನೆಸ್ ಮರಳಿ ಪಡೆದುದರ ಹೊರತಾಗಿಯೂ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಅವರಿಗೆ ಕೊಕ್ ನೀಡಲಾಗಿದೆ.

ಇಂಗ್ಲೆಂಡ್ ಸರಣಿ ವೇಳೆ ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿದ್ದ ಗೌತಮ್ ಗಂಭೀರ್ ಸಹ ತಂಡಕ್ಕೆ ಪುನರಾಮನ ಮಾಡಿಕೊಂಡಿದ್ದಾರೆ. ಈ ನಡುವೆ ಎಸ್. ಅರವಿಂದ್ ಹಾಗೂ ವಿನಯ್ ಕುಮಾರ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವುದು ಕರ್ನಾಟಕ ಅಭಿಮಾನಿಗಳಿಗೆ ಭಾರಿ ಸಂತಸಕ್ಕೆ ಕಾರಣವಾಗಿದೆ.

ಕಳೆದ ರಣಜಿ ಟ್ರೋಫಿ ಹಾಗೂ ಐಪಿಎಲ್‌ನಲ್ಲಿ ನೀಡಿರುವ ಶ್ರೇಷ್ಠ ಪ್ರದರ್ಶನ ಗಮನಿಸಿ ಅರವಿಂದ್ ಅವರನ್ನು ತಂಡದಲ್ಲಿ ಸೇರಿಕೊಳ್ಳಲಾಗಿದೆ. ಹಾಗೆಯೇ ಇಂಗ್ಲೆಂಡ್‌ನಲ್ಲಿ ಕಳಪೆ ಪ್ರದರ್ಶನ ನೀಡಿದರ ಹೊರತಾಗಿಯೂ ವಿನಯ್‌ಗೆ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ.

ಮೊದಲೆರಡು ಪಂದ್ಯಗಳಿಂದ ನಾಯಕ ಮಹೇಂದ್ರ ಸಿಂಗ್ ಧೋನಿ ವಿಶ್ರಾಂತಿಯನ್ನು ಬಯಸಿದ್ದರೂ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಆಯ್ಕೆ ಸಮಿತಿ ಬಯಸಿಲಿಲ್ಲ. ಅಲ್ಲದೆ ಇಂಗ್ಲೆಂಡ್‌ನಲ್ಲಿ ಪ್ರಭಾವಿ ಪ್ರದರ್ಶನ ನೀಡಿದ್ದ ಅಜಿಂಕ್ಯಾ ರಹಾನೆ ಹಾಗೂ ಪಾರ್ಥಿವ್ ಪಟೇಲ್ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿ ಒಂದೇ ಒಂದು ಅವಕಾಶ ಗಿಟ್ಟಿಸದ ವರುಣ್ ಆರೋನ್‌ರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ವೇಗದ ಪಡೆಯನ್ನು ಪ್ರವೀಣ್ ಕುಮಾರ್ ನಿಭಾಯಿಸಲಿದ್ದು, ಉಮೇಶ್ ಯಾದವ್ ಹಾಗೂ ಲೆಗ್ ಸ್ಪಿನ್ನರ್ ರಾಹುಲ್ ಶರ್ಮಾ ಸಹ ತಂಡದಲ್ಲಿದ್ದಾರೆ.

ಟೀಮ್ ಇಂಡಿಯಾ ಇಂತಿದೆ:

1. ಮಹೇಂದ್ರ ಸಿಂಗ್ ಧೋನಿ
2. ಗೌತಮ್ ಗಂಭೀರ್
3. ಪಾರ್ಥಿವ್ ಪಟೇಲ್
4. ಅಜಿಂಕ್ಯಾ ರಹಾನೆ
5. ವಿರಾಟ್ ಕೊಹ್ಲಿ
6. ಸುರೇಶ್ ರೈನಾ
7. ರವೀಂದ್ರ ಜಡೇಜಾ
8. ಆರ್. ಅಶ್ವಿನ್
9. ವರುಣ್ ಆರೋನ್
10. ಉಮೇಶ್ ಯಾದವ್
11. ವಿನಯ್ ಕುಮಾರ್
12. ಶ್ರೀನಾಥ್ ಅರವಿಂದ್
13. ರಾಹುಲ್ ಶರ್ಮಾ
14. ಮನೋಜ್ ತಿವಾರಿ
15. ಪ್ರವೀಣ್ ಕುಮಾರ್

ವೆಬ್ದುನಿಯಾವನ್ನು ಓದಿ