ಸನತ್ ಜಯಸೂರ್ಯ‌ಗೆ 40ನೇ ಹುಟ್ಟು ಹಬ್ಬದ ಸಂಭ್ರಮ

ಮಂಗಳವಾರ, 30 ಜೂನ್ 2009 (12:48 IST)
PTI
ಶ್ರೀಲಂಕಾ ತಂಡದ ಮಾಜಿ ನಾಯಕ, ಸ್ಚೋಟಕ ಬ್ಯಾಟ್ಸ್‌ಮೆನ್ ಸನತ್ ಜಯಸೂರ್ಯ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಮುಂಬರುವ 2011ರ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ.

ದೈಹಿಕವಾಗಿ ಮಾನಸಿಕವಾಗಿವಾಗಿ ಉತ್ತಮ ಸ್ಥಿತಿಯಲ್ಲಿದ್ದಲ್ಲಿ ವಯಸ್ಸು ಸಮಸ್ಯೆಯಾಗುವುದಿಲ್ಲ .ಉತ್ತಮ ಆಟವಾಡಿದಲ್ಲಿ ತಂಡದಲ್ಲಿ ಉನ್ನತ ಸ್ಥಾನದಲ್ಲಿರಲು ಸಾಧ್ಯ ಎಂದು ಜಯಸೂರ್ಯ ತಿಳಿಸಿದ್ದಾರೆ.

ಸ್ಫೋಟಕ ಬ್ಯಾಟಿಂಗ್ ಹಾಗೂ ಸ್ಪಿನ್ ಬೌಲಿಂಗ್ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಸನತ್ ಜಯಸೂರ್ಯ, 1989ರಲ್ಲಿ ಮೆಲ್ಬೊರ್ನ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು .1996ರಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ಉತ್ತಮ ಆಲ್‌-ರೌಂಡರ್ ಗೌರವಕ್ಕೆ ಪಾತ್ರರಾಗಿದ್ದರು

ಏಕದಿನ ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್‌ ನಂತರ ಜಯಸೂರ್ಯ 13 ಸಾವಿರ ರನ್‌ಗಳ ಗಡಿಯನ್ನು ದಾಟಿದ ಎರಡನೇ ಬ್ಯಾಟ್ಸ್‌ಮೆನ್‌ರಾಗಿದ್ದು, ಏಕದಿಂದ ಪಂದ್ಯಗಳಲ್ಲಿ ಶತಕ ಬಾರಿಸಿದ ಹಿರಿಯ ಆಟಗಾರರಾಗಿದ್ದರೆ.

ಪ್ರಸಕ್ತ ದಿನಗಳಲ್ಲಿ ನನಗೆ ದಾಖಲೆ ನಿರ್ಮಿಸುವ ಚಿಂತೆಯಿಲ್ಲ. ವೇಗವಾಗಿ ರನ್‌ಗಳಿಸಿ ತಂಡವನ್ನು ಗೆಲುವಿನತ್ತ ಸಾಗಿಸುವುದು ನನ್ನ ಗುರಿಯಾಗಿದೆ ಎಂದು ಎಡಗೈ ಬ್ಯಾಟ್ಸ್‌ಮೆನ್ ಜಯಸೂರ್ಯ ಹೇಳಿದ್ದಾರೆ.

ಜಯಸೂರ್ಯ 2007ರಲ್ಲಿ ಟೆಸ್ಟ್ ಪಂದ್ಯಗಳಿಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಆದರೆ ದೈಹಿಕತೆಗೆ ಸವಾಲೊಡ್ಡುವ ಏಕದಿನ ಪಂದ್ಯಗಳಲ್ಲಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಎಂದಿನಂತೆ ಮುಂದುವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ