ಸಿಸಿಎಲ್ ಪಂದ್ಯಾವಳಿಗೆ ಕರ್ನಾಟಕ ಬುಲ್ಡೋಜರ್ಸ್ ಅಭ್ಯಾಸ ಜೋರು

ಶನಿವಾರ, 25 ಜನವರಿ 2014 (15:17 IST)
PR
PR
ಅಂತೂ ಇಂತೂ ಮತ್ತೆ ಸೆಲೆಬ್ರೆಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಜ್ವರ ಶುರುವಾಗುತ್ತಿದೆ. ಕಳೆದ ಮೂರನೇ ಆವೃತ್ತಿಯಲ್ಲಿ ನಡೆದ ಸಿಸಿಎಲ್‌ನಲ್ಲಿ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಸಿಸಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಇದೀಗ ಶುರುವಾಗಲಿರುವ ನಾಲ್ಕನೇ ಆವೃತ್ತಿಯಲ್ಲಿ ಯಾರು ಚಾಂಪಿಯನ್ ಆಗುತ್ತಾರೆ ಎಂಬ ಕುತೂಹಲ ಎಲ್ಲೆಡೆ ಮೂಡಿದೆ. ಅಂದಹಾಗೆ, ಹೊಸ ವರ್ಷದ ಆರಂಭದಲ್ಲೇ ಭರ್ಜರಿ ಮನರಂಜನೆ ನೀಡಲು ಸಿಸಿಎಲ್ ರೆಡಿಯಾಗಿದೆ. ಸಿಸಿಎಲ್ ಬರಮಾಡಿಕೊಳ್ಳಲು ಸಿನಿಪ್ರೇಮಿಗಳು ಸೇರಿದಂತೆ ಕ್ರೀಡಾಭಿಮಾನಿಗಳೂ ತುದಿಗಾಲ ಮೇಲೆ ನಿಂತಿದ್ದಾರೆ.

PR
PR
ಈಗಾಗಲೇ ಸಿಸಿಎಲ್‌ನಲ್ಲಿ ಭಾಗವಹಿಸಲಿರುವ ಕರ್ನಾಟಕ ಬುಲ್ಡೋಜರ್ಸ್ ತಂಡ ಪ್ರಕಟಗೊಂಡಿದ್ದು, ಎಂದಿನಂತೆ ಈ ಬಾರಿಯೂ ಕಠಿಣ ಅಭ್ಯಾಸದಲ್ಲಿ ಬುಲ್ಡೋಜರ್ಸ್ ತಂಡ ನಿರತವಾಗಿದೆ. ಈ ಬಾರಿಯೂ ಗೆಲ್ಲುವ ಮೂಲಕ ಹಾಲಿ ಚಾಂಪಿಯನ್ ಪಟ್ಟವನ್ನು ಹಾಗೆಯೇ ಉಳಿಸಿಕೊಳ್ಳುವ ಉತ್ಸಾಹದಲ್ಲಿದೆ.

PR
PR
2004 ರ ಜನವರಿ 25 ರಂದು ಮುಂಬೈನಲ್ಲಿ ಸಿಸಿಎಲ್‌ಗೆ ಚಾಲನೆ ಸಿಗಲಿದೆ. ಅಂದು ಮಧ್ಯಾಹ್ನ 3ರಿಂದ 7ಗಂಟೆಯವರೆಗೆ ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ "ರೋಸ್ ಹಾಗೂ ಚೆನ್ನೈ ತಂಡಗಳು ಸೆಣೆಸಾಟ ನಡೆಸಲಿವೆ. ಅದೇ ದಿನ 7ರಿಂದ 11ಗಂಟೆಯವರೆಗೆ ನಡೆಯಲಿರುವ ಎರಡನೇ ಪಂದ್ಯದಲ್ಲಿ. ವೀರ ಮರಾಟಿ ಮತ್ತು ಭೋಜ್‌ಪುರಿ ದಬಾಂಗ್ಸ್ ತಂಡಗಳು ತಮ್ಮ ಗೆಲುವಿಗಾಗಿ ಮೈದಾನದಲ್ಲಿ ಹೋರಾಟ ನಡೆಸಲಿವೆ.

PTI
PR
ಜ. 26 ರ ಮಧ್ಯಾಹ್ನ 3ಗಂಟೆಗೆ ಬೆಂಗಳೂರಿನಲ್ಲಿ ಕೇರಳ ಸ್ಟ್ರೆಕರ‍್ಸ್ ಹಾಗೂ ತೆಲುಗು ವಾರಿಯರ‍್ಸ್ ನಡುವೆ ಪಂದ್ಯ ನಡೆಯಲಿದ್ದು. ಆ ಬಳಿಕ ಸಂಜೆ7 ಗಂಟೆಗೆ ಕರ್ನಾಟಕ ಬುಲ್ಡೋಜರ್ಸ್ ತಂಡ ಬೆಂಗಾಲ್ ಟೈಗರ್ಸ್ ತಂಡವನ್ನು ಎದುರಿಸಲಿದೆ. ಜನವರಿ 25 ರಿಂದ ಫೆಬ್ರವರಿ 23 ರವರೆಗೂ ನಡೆಯಲಿರುವ ಸಿಸಿಎಲ್ ಪಂದ್ಯಾವಳಿ ಮುಂಬೈ, ಚೆನ್ನೈ, ಕೊಚ್ಚಿ, ಬೆಂಗಳೂರು, ರಾಂಚಿ ಮತ್ತು ದುಬೈನಲ್ಲಿ ಜರುಗಲಿದೆ.

ವೆಬ್ದುನಿಯಾವನ್ನು ಓದಿ