ಸ್ಪಾಟ್‌ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದೇನೆ ಕ್ಷಮಿಸಿ: ಸಲ್ಮಾನ್ ಬಟ್

ಭಾನುವಾರ, 30 ಜೂನ್ 2013 (10:48 IST)
ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದನ್ನು ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಒಪ್ಪಿಕೊಂಡಿರುವ ಪಾಕಿಸ್ತಾನ ತಂಡದ ಮಾಜಿ ನಾಯಕ ಸಲ್ಮಾನ್‌ ಬಟ್‌, ಅಭಿಮಾನಿಗಳ ಕ್ಷಮೆಯಾಚಿಸಿದ್ದಾರೆ.

ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಐಸಿಸಿ ನ್ಯಾಯ ಮಂಡಳಿಯ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇನೆ. ನನ್ನ ನಡವಳಿಕೆಯಿಂದ ಅಭಿಮಾನಿಗಳಿಗೆ ಆಗಿರುವ ನಿರಾಸೆಗೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

2010ರ ಇಂಗ್ಲೆಂಡ್‌ ಪ್ರವಾಸದ ವೇಳೆ ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಮಧ್ಯಮ ವೇಗಿಗಳಾದ ಮೊಹಮದ್‌ ಆಮಿರ್‌ ಮತ್ತು ಮೊಹಮದ್‌ ಆಸಿಫ್ ಜತೆಗೂಡಿ ನೋಬಾಲ್‌ ಎಸೆಯಲು ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರು. ಇದರಿಂದ ಲಂಡನ್‌ನಲ್ಲಿ ಜೈಲು ಶಿಕ್ಷೆ ಹಾಗೂ ಐಸಿಸಿಯಿಂದ ನಿಷೇಧ ಶಿಕ್ಷೆಗೂ ಸಲ್ಮಾನ್‌ ಗುರಿಯಾಗಿದ್ದರು.

ವೆಬ್ದುನಿಯಾವನ್ನು ಓದಿ