ಹರ್ಭಜನ್ ಶ್ರೀಶಾಂತ್‌ಗೆ ಕಪಾಳಕ್ಕೆ ಹೊಡೆದಿದ್ದು ನಿಜ: ನಾನಾವತಿ

ಶನಿವಾರ, 13 ಏಪ್ರಿಲ್ 2013 (11:44 IST)
PR
PR
ಐದು ವರ್ಷಗಳ ಹಿಂದೆ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ವೇಗಿ ಎಸ್.ಶ್ರೀಶಾಂತ್‌ಗೆ ಮತ್ತು ಸ್ಪಿನ್ನರ್ ಹರ್ಭಜನ್ ಸಿಂಗ್ ನಡುವಿನ ಕಪಾಳಮೋಕ್ಷ ಪ್ರಕರಣದ ವಿಚಾರಣೆ ನಡೆಸುತ್ತಿರುವ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಸುಧೀರ್ ನಾನಾವತಿ ಅವರು ಹರ್ಭಜನ್ ಸಿಂಗ್ ವೇಗಿ ಶ್ರೀಶಾಂತ್‌ಗೆ ಮೊಣಕೈಯಿಂದ ಕುಕ್ಕಿಲ್ಲ. ಕಪಾಳಮೋಕ್ಷ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಪಾಳಮೋಕ್ಷ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ಬಿಸಿಸಿಐ ನೇಮಕ ಮಾಡಿದ್ದ ಜಸ್ಟೀಸ್ ನಾನಾವತಿ ಅವರು ಶ್ರೀಶಾಂತ್ ತನಗೆ ಹರ್ಭಜನ್ ಸಿಂಗ್ ಮೊಣಕೈಯಿಂದ ಮುಖಕ್ಕೆ ಕುಕ್ಕಿರುವುದಾಗಿ ನೀಡಿದ್ದ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ. ಹರ್ಭಜನ್‌ಗೆ ತಾನು ಕೈಕುಲುಕಲು ಹೋದಾಗ ಸಿಟ್ಟಿನಿಂದ ತನ್ನ ಮುಖಕ್ಕೆ ಮೊಣಕೈಯಿಂದ ಕುಕ್ಕಿದರು.

ಮತ್ತೆ ಎರಡನೆ ಬಾರಿ ಅದೇ ರೀತಿಯ ಪ್ರಯತ್ನ ನಡೆಸಿದಾಗ ಇಬ್ಬರು ಭದ್ರತಾ ಅಧಿಕಾರಿಗಳು ತಡೆದಿರುವುದಾಗಿ ನ್ಯಾಯಮೂರ್ತಿ ನಾನಾವತಿಯವರ ಮುಂದೆ ಶ್ರೀಶಾಂತ್ ಹೇಳಿಕೆ ನೀಡಿದ್ದರು. ಆದರೆ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೊ ದಾಖಲೆಗಳನ್ನು ಪರಿಶೀಲಿಸಿರುವ ನಾನಾವತಿ, ಶ್ರೀಶಾಂತ್‌ಗೆ ಕಪಾಳ ಮೋಕ್ಷವಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ.

ಐದು ವರ್ಷಗಳ ಹಿಂದಿನ ಈ ಘಟನೆಗೆ ಸಂಬಂಧಿಸಿ ಶ್ರೀಶಾಂತ್ ಟ್ವಿಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿ, ಐಪಿಎಲ್‌ನಲ್ಲಿ ವಿವಾದವನ್ನು ಹುಟ್ಟು ಹಾಕಿದ್ದಾರೆ. ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವೆ ಗುರುವಾರ ಸಂಭವಿಸಿದ ವಾಗ್ವಾದವನ್ನು ತಮ್ಮ ಹಾಗೂ ಹರ್ಭಜನ್ ಸಿಂಗ್ ನಡುವಿನ ಕಪಾಳಮೋಕ್ಷ ಪ್ರಕರಣಕ್ಕೆ ಹೋಲಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಶ್ರೀಶಾಂತ್, ಹರ್ಭಜನ್ ಸಿಂಗ್ ಬೆನ್ನಿಗೆ ಚೂರಿಯಿಂದ ಇರಿದವರು ಎಂದು ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ