ಹಿರಿಯರನ್ನು ಬದಲಿಸಲು ವಯೋಮಿತಿ ಮಾನದಂಡವಲ್ಲ: ವೆಂಗ್‌ಸರ್ಕಾರ್

ಬುಧವಾರ, 18 ಜನವರಿ 2012 (15:10 IST)
PTI
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿಫಲವಾದ ಹಿರಿಯ ಕ್ರಿಕೆಟಿಗರನ್ನು ಬದಲಾಯಿಸಬೇಕು ಎನ್ನುವ ಒತ್ತಡಗಳನ್ನು ತಳ್ಳಿಹಾಕಿದ ಮಾಜಿ ನಾಯಕ ವೆಂಗ್‌ಸರ್ಕಾರ್, ಹಿರಿಯ ಆಟಗಾರರನ್ನು ಬದಲಾಯಿಸಲು ವಯೋಮಿತಿಯೊಂದೆ ಮಾನದಂಡವಲ್ಲ ಎಂದು ಹೇಳಿದ್ದಾರೆ.

ಹಿರಿಯ ಆಟಗಾರರ ದೈಹಿಕ ಆರೋಗ್ಯ ಸ್ಥಿತಿ ಮತ್ತು ಉತ್ತಮ ಫಾರ್ಮ್ ಮೇಲೆ ಅವಲಂಬಿಸಿರುತ್ತದೆ. ವಯಸ್ಸಿನ ಆಧಾರದ ಮೇಲೆ ಹಿರಿಯ ಆಟಗಾರರನ್ನು ಬದಲಿಸಬೇಕು ಎನ್ನುವ ನಿಲುವು ಸರಿಯಲ್ಲ. ಆದರೆ, ಉತ್ತಮ ಪ್ರದರ್ಶನ ನೀಡದ ಆಟಗಾರರನ್ನು ತಂಡದಿಂದ ಹೊರಗಿಡಬೇಕು ಎಂದು ತಿಳಿಸಿದ್ದಾರೆ.

ಮಹೇಂದ್ರ ಸಿಂಗ್ ನೇತೃತ್ವದ ಧೋನಿ ತಂಡ ಆಸ್ಟ್ರೇಲಿಯಾದಲ್ಲಿ ಕಳಪೆ ಪ್ರದರ್ಶನ ನೀಡಿರುವುದು ಅಚ್ಚರಿ ತಂದಿಲ್ಲ. ಆಟಗಾರರ ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಕೂಡಾ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ ಎಂದು ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ವೆಂಗ್‌ಸರ್ಕಾರ್ ನಿರಾಸೆ ವ್ಯಕ್ತಪಡಿಸಿದ್ದಾರೆ.

ಅಜಿಂಕ್ಯ ರೆಹಾನೆ ಮತ್ತು ರೋಹಿತ್ ಶರ್ಮಾ ಕೂಡಾ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ಆದರೆ, ಒಂದು ಬಾರಿಯೂ ಬ್ಯಾಟಿಂಗ್ ಅವಕಾಶ ದೊರೆಯಲಿಲ್ಲ. ಇದು ನ್ಯಾಯಸಮ್ಮತವೇ ಎಂದು ವೆಂಗ್‌ಸರ್ಕಾರ ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ