’ಪಿಚ್‌ಗೆ ನಮಿಸಿ ಅಂತಿಮವಾಗಿ ಹೊರ ನಡೆದ’ ಕ್ರಿಕೆಟ್‌ ದೇವರು

ಶನಿವಾರ, 16 ನವೆಂಬರ್ 2013 (16:43 IST)
PTI
PTI
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ತಮ್ಮ ಮಾತುಗಳನ್ನು ಮುಗಿಸಿದ ಸಚಿನ್ ತೆಂಡೂಲ್ಕರ್‌ ಅಂತಿಮವಾಗಿ ಪಿಚ್‌ ನಮಿಸಿ ಸ್ಟೇಡಿಯಂನಿಂದ ಹೊರ ನಡೆದರು. ಕ್ರಿಕೆಟ್‌ ದೇವರ ಈ ದೃಶ್ಯವನ್ನು ನೋಡಿದ ಅಭಿಮಾನಿಗಳು ಇನ್ನುಮುಂದೆ ಕ್ರಿಕೆಟ್‌ ದೇವರು ಬರುವುದೇ ಇಲ್ಲವಲ್ಲ..! ಕ್ರಿಕೆಟ್ ಹೇಗೆ ನೋಡುವುದು? ಸಚಿನ್ ಇಲ್ಲದ ಕ್ರಿಕೆಟ್‌ ಅನ್ನು ಹೆಗೆ ಅರಗಿಸಿಕೊಳ್ಳುವುದು ಎಂದು ದುಃಖಿತರದರು. ದೇವರ ಕಣ್ಣಲ್ಲಿಯೂ ನೀರಿತ್ತು.. ಅಭಿಮಾನಿಗಳ ಕಣ್ಣಲ್ಲಿಯೂ ನೀರಿತ್ತು. ಈ ದೃಶ್ಯ, ಸಚಿನ್ ಮತ್ತು ಅಭಿಮಾನಿಗಳ ನಡುವಿನ ಭಾವನಾತ್ಮಕ ಸಂಬಂಧವನ್ನು ಎತ್ತಿ ತೋರಿಸುತ್ತಿತ್ತು.

ಅಂತಿಮ ಭಾಷಣದಲ್ಲಿ ಎಲ್ಲರನ್ನೂ ನೆನೆದು, ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದ ಸಚಿನ್ ತೆಂಡೂಲ್ಕರ್‌ ಕೊನೆಯದಗಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುವಾಗ ಹೆಚ್ಚು ಭಾವುಕರಾದರು. ನೀವು ಕೂಗುತ್ತಿದ್ದ "ಸಚಿನ್ ಸಚಿನ್ ಎಂಬ ಕೂಗು ನನ್ನ ಬದುಕಿನ ಕೊನೆಯ ಉಸಿರು ಇರುವವರೆಗೂ ನನ್ನ ಕಿವಿಯಲ್ಲಿ ಸದಾ ಗುನುಗುತ್ತಿರುತ್ತದೆ" ಎಂದು ಹೇಳಿದ್ರು. "ನಾನು ಹೆಚ್ಚು ಮಾತನಾಡಿದಂತೆ, ಹೆಚ್ಚು ಭಾವುಕನಾಗುತ್ತೇನೆ. ಅದಕ್ಕೆ ನಾನು ಹೆಚ್ಚು ಮಾತನಾಡಲು ಸಾಧ್ಯವಾಗುತ್ತಿಲ್ಲ" ಎಂದು ಹೇಳಿದ ಸಚಿನ್ ತೆಂಡೂಲ್ಕರ್‌ ಅವರು ಅಂತಿಮವಗಿ ಪಿಚ್‌ಗೆ ನಮಿಸಿ ಸ್ಟೇಡಿಯಂನಿಂದ ಹೊರ ಬಂದರು.

ಸಚಿನ್‌ ಅವರನ್ನು ಹೆಗಲ ಮೇಲೆ ಹೊತ್ತುಕೊಂಡ ನಾಯಕ ಧೋನಿ ಮತ್ತು ಟೀಂ ಇಂಡಿಯಾ ಆಟಗಾರರು ಸ್ಟೇಡಿಯಂ ಸುತ್ತಲೂ ಅವರನ್ನು ಹೊತ್ತು ತಿರುಗಾಡುತ್ತಿದ್ದರೆ, ಅಭಿಮಾನಿಗಳು ಸಚಿನ್ ಸಚಿನ್ ಎಂದು ಕೂಗುತ್ತ ಭಾವುಕರಾದ್ರು. ಅಭಿಮಾನಿಗಳ ಕೂಗನ್ನು ಕೇಳಿದ ಕ್ರಿಕೆಟ್‌ ದೇವರ ಕಣ್ಣಲ್ಲಿ ಕಂಬನಿಧಾರೆ ಹರಿಯಲು ಶುರು ಮಾಡಿತ್ತು.

ವೆಬ್ದುನಿಯಾವನ್ನು ಓದಿ