14 ತಿಂಗಳ ಬಳಿಕ ಮುನಾಫ್, ಯೂಸುಫ್‌ಗೆ ಏಕಲವ್ಯ ಪ್ರಶಸ್ತಿ ಪ್ರದಾನ

ಗುರುವಾರ, 7 ಜೂನ್ 2012 (15:33 IST)
PTI
28 ವರ್ಷಗಳ ಬಳಿಕ 2011ರಲ್ಲಿ ಭಾರತ ಏಕದಿನ ವಿಶ್ವಕಪ್ ಎತ್ತಿ ಹಿಡಿದಾಗ ತಮ್ಮ ರಾಜ್ಯದ ಆಟಗಾರರಾದ ಮುನಾಫ್ ಪಟೇಲ್ ಹಾಗೂ ಯೂಸುಫ್ ಪಠಾಣ್ ಅವರಿಗೆ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸುವುದಾಗಿ ಗುಜರಾತ್ ಸರ್ಕಾರ ಘೋಷಿಸಿತ್ತು.

ಆದರೆ ರಾಜ್ಯದ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಯನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿ 14 ತಿಂಗಳುಗಳೇ ಕಳೆದರೂ ಆಟಗಾರರಿಗೆ ಪ್ರಶಸ್ತಿ ನೀಡಿರಲಿಲ್ಲ. ಇದರಿಂದಾಗಿ ಗುಜರಾತ್ ಸರ್ಕಾರ ಭಾರಿ ಟೀಕೆಗೊಳಗಾಗಿತ್ತು

ಇದೀಗ ಗುಜರಾಜ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮುನಾಫ್ ಹಾಗೂ ಪಠಾಣ್‌ಗೆ ಪ್ರಶಸ್ತಿ ಸನ್ಮಾನ ಫಲಕ ಹಾಗೂ ಒಂದು ಲಕ್ಷ ರೂಪಾಯಿ ಚೆಕ್ ನೀಡಿ ಸನ್ಮಾನಿಸಿದೆ. ಅಲ್ಲದೆ ಪ್ರತಿ ಗುಜರಾತಿಗರು ಹೆಮ್ಮೆ ಪಡುವಂತೆ ಮಾಡಿದ್ದೀರಿ ಎಂದು ಮೋದಿ ಅಭಿನಂದಿಸಿದ್ದಾರೆ.

ವೆಬ್ದುನಿಯಾವನ್ನು ಓದಿ