ಎರಡೆರಡು ಹುದ್ದೆ: ಶ್ರೀಕಾಂತ್‌ ವಿರುದ್ಧ ಸುಪ್ರೀಂಕೋರ್ಟ್ ಆಕ್ಷೇಪ

ಬುಧವಾರ, 17 ಡಿಸೆಂಬರ್ 2014 (13:24 IST)
ಐಪಿಎಲ್ ಮತ್ತು ಬಿಸಿಸಿಐನಲ್ಲಿ ಎರಡೆರಡು ಹುದ್ದೆಗಳನ್ನು ನಿಭಾಯಿಸುತ್ತಿರುವ ಮಾಜಿ ಕ್ರಿಕೆಟಿಗರ ಹೆಸರನ್ನು ಬಿಸಿಸಿಐ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದೆ. ಹಲವು ಮಾಜಿ ಕ್ರಿಕೆಟಿಗರ ಹೆಸರು ಪಟ್ಟಿಯಲ್ಲಿದ್ದು, ಸುನಿಲ್ ಗವಾಸ್ಕರ್, ರವಿ ಶಾಸ್ತ್ರಿ ಮತ್ತು ಸೌರವ್ ಗಂಗೂಲಿ ಮತ್ತು ಶ್ರೀಕಾಂತ್, ವೆಂಕಟೇಶ್ ಪ್ರಸಾದ್ ಹೆಸರನ್ನು ನಮೂದಿಸಲಾಗಿದೆ.

ಶ್ರೀಕಾಂತ್ ಅವರು ಸೆಲಕ್ಷನ್ ಕಮಿಟಿಯ ಮುಖ್ಯಸ್ಥರನ್ನಾಗಿ ನೇಮಿಸಿದ ಕ್ರಮದ ಬಗ್ಗೆ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಶ್ರೀಕಾಂತ್ ಚೆನ್ನೈ ಸೂಪರ್ ಕಿಂಗ್ಸ್ ಬ್ರಾಂಡ್ ರಾಯಭಾರಿಯಾಗಿದ್ದು, ಆಯ್ಕೆದಾರರ ಸಮಿತಿ ಮುಖ್ಯಸ್ಥರು ಕೂಡ ಆಗಿದ್ದಾರೆ.

ಆಯ್ಕೆದಾರರ ಸಮಿತಿ ಮುಖ್ಯಸ್ಥರು ಐಪಿಎಲ್ ತಂಡದಲ್ಲಿ ಹೇಗೆ ಹುದ್ದೆಯನ್ನು ಹೊಂದುತ್ತಾರೆ ಎಂದು ಪ್ರಶ್ನಿಸಿದ ಸುಪ್ರೀಂಕೋರ್ಟ್ ಇದು ಹಿತಾಸಕ್ತಿ ಸಂಘರ್ಷದ ಸ್ಪಷ್ಟ ಉದಾಹರಣೆ ಎಂದು ಹೇಳಿದೆ. ಎರಡೆರಡು ಹುದ್ದೆಯನ್ನು ಹೊಂದುವುದು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುವುದಿಲ್ಲವೇ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.

ವೆಬ್ದುನಿಯಾವನ್ನು ಓದಿ