2011ರಲ್ಲಿ ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್ನಲ್ಲಿ ಧೋನಿ ಸಿಕ್ಸರ್ ಎತ್ತುವುದರೊಂದಿಗೆ ಭಾರತಕ್ಕೆ ವಿಶ್ವಕಪ್ ಪ್ರಶಸ್ತಿ ಜಯಿಸಿಕೊಟ್ಟಿದ್ದರು. ಭಾರತೀಯ ತಂಡದ 15 ಆಟಗಾರರ ಪೈಕಿ 11 ಮಂದಿ ಇದೇ ಮೊದಲ ಬಾರಿ ವಿಶ್ವಕಪ್ನಲ್ಲಿ ಆಡುತ್ತಿದ್ದಾರೆ. ವಿರಾಟ್ ಕೊಹ್ಲಿ, ಸುರೇಶ್ ರೈನಾ ಮತ್ತು ಆರ್.ಅಶ್ವಿನ್ ಅವರು 2011ರ ವಿಜಯೀ ತಂಡದಲ್ಲಿದ್ದ ಇತರ ಮೂವರು ಆಟಗಾರರು.
ಓರ್ವ ಅತ್ಯುತ್ತಮ ಪಂದ್ಯ ಮುಕ್ತಾಯಗಾರ ಮತ್ತು ಚುಟುಕು ಕ್ರಿಕೆಟ್ನಲ್ಲಿ ಭಾರತದ ಅತ್ಯುತ್ತಮ ನಾಯಕನಾದ ಧೋನಿ ಅವರು ಇಂಗ್ಲೆಂಡ್ನಲ್ಲಿ ನಡೆಯಲಿರುವ 2019ರ ವಿಶ್ವಕಪ್ನಲ್ಲಿ ಆಡುವ ಸಾಧ್ಯತೆ ಬಹುತೇಕ ಇಲ್ಲ. ಅವರು ಅಷ್ಟರಲ್ಲಿ 38ನೇ ಹರೆಯಕ್ಕೆ ಕಾಲಿರಿಸುವ ಹಂತದಲ್ಲಿರುತ್ತಾರೆ. ಸುಮಾರು 9 ವರ್ಷಗಳ ಕಾಲ ಎಲ್ಲ ಮೂರು ಮಾದರಿಯ ಕ್ರಿಕೆಟ್ನಲ್ಲಿ ಸತತವಾಗಿ ಆಡಿರುವ ಧೋನಿ ಮುಂದಿನ ಎರಡು ವರ್ಷಗಳಲ್ಲಿ ಏಕದಿನ ಕ್ರಿಕೆಟ್ಗೆ ವಿದಾಯ ಘೋಷಿಸುವ ನಿರೀಕ್ಷೆಯಿದೆ. ಒಂದು ವೇಳೆ ಅವರು ಭಾರತಕ್ಕೆ ಸತತ ಎರಡನೆ ಬಾರಿ ವಿಶ್ವಕಪ್ ಗೆಲ್ಲಿಸಿಕೊಟ್ಟಲ್ಲಿ ಆಗಲೇ ಏಕದಿನ ಕ್ರಿಕೆಟ್ಗೆ ವಿದಾಯ ಘೋಷಿಸಿದಲ್ಲಿ ಅಚ್ಚರಿಯಿಲ್ಲ.