ನಿಷೇಧದಿಂದ ಪಾರಾದ ಆಂಡರ್‌ಸನ್: ಆತಿಥೇಯ ತಂಡಕ್ಕೆ ಗೆಲ್ಲುವ ಅವಕಾಶ

ಸೋಮವಾರ, 4 ಆಗಸ್ಟ್ 2014 (17:58 IST)
ಟ್ರೆಂಟ್ ಬ್ರಿಜ್ ಘಟನೆಯಲ್ಲಿ ಜೇಮ್ಸ್ ಆಂಡರ್‌ಸನ್ ಅವರು ಯಾವುದೇ ನಿಷೇಧದಿಂದ ಪಾರಾಗಿದ್ದರಿಂದ ಇನ್ನುಳಿದ ಎರಡು ಟೆಸ್ಟ್‌ಗಳಲ್ಲಿ ಅನುಕೂಲ ಪಡೆಯುವುದು ಆತಿಥೇಯ ತಂಡಕ್ಕೆ ಸೇರಿದೆ ಎಂದು ಮಾಜಿ ವೇಗಿ ಸ್ಟೀವ್ ಹಾರ್ಮಿಸನ್ ತಿಳಿಸಿದ್ದಾರೆ. 
 
 ಆಂಡರ್ಸನ್ ಅವರನ್ನು ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ದೂಡಿದ ಆರೋಪದಿಂದ ಐಸಿಸಿ ಸ್ಥಾಪಿಸಿದ ನ್ಯಾಯಾಂಗ ಸಮಿತಿ ದೋಷಮುಕ್ತಗೊಳಿಸಿದೆ. 
ಭಾರತ ಎರಡನೇ ಟೆಸ್ಟ್ ಗೆದ್ದುಕೊಂಡ ಬಳಿಕ ಇಂಗ್ಲೆಂಡ್ ಮೂರನೇ ಟೆಸ್ಟ್ ಗೆಲ್ಲುವ ಮೂಲಕ ಸರಣಿಯನ್ನು ಸಮ ಸಮ ಮಾಡಿದೆ. ಆಂಡರ್‌ಸನ್ ಅವರಿಗೆ ನಿಷೇಧ ವಿಧಿಸಿದ್ದರೆ ಅದೊಂದು ನಾಚಿಕೆಗೇಡಿನ ವಿಷಯವಾಗಿತ್ತು. ಏಕೆಂದರೆ ಸರಣಿಯ ಮಧ್ಯದಲ್ಲಿ ಎರಡು ತಂಡಗಳ ಸ್ಪರ್ಧೆಯ ಸಮತೋಲನ ತಪ್ಪಿಹೋಗ್ತಿತ್ತು ಎಂದು ಹಾರ್ಮಿಸನ್ ಹೇಳಿದರು.

ಕಳೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ಆಂಡರ್‌ಸನ್ ಎರಡು ಬಾರಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಪಾತ್ರರಾಗಿದ್ದು, ಇದರಿಂದ ಇಂಗ್ಲೆಂಡ್ ಪರ ಗೆಲುವಿನ ಗಾಳಿ ಬೀಸಲಿದೆ ಎಂದು ಅವರು ಆಶಿಸಿದರು.  ಆಂಡರ್‌ಸನ್ ಅವರಿಗೆ ನಿಷೇಧ ವಿಧಿಸಿದ್ದರೆ, ಬ್ರಾಂಡ್ ಫಿಟ್‌ನೆಸ್ ಕೊರತೆಯಿಂದಾಗಿ ಅವರ ಮೇಲೆ ಹೆಚ್ಚಿನ ಒತ್ತಡಬೀಳುತ್ತಿತ್ತು. ಆದರೆ ಇವರಿಬ್ಬರೂ ಮುಂದಿನ ಟೆಸ್ಟ್‌ಗೆ ಲಭ್ಯವಾಗಿದ್ದರಿಂದ ಇಂಗ್ಲೆಂಡ್ ಮೇಲುಗೈ ಸಾಧಿಸಿದೆ ಎಂದು ಅವರು ನುಡಿದರು. 

ವೆಬ್ದುನಿಯಾವನ್ನು ಓದಿ