ಸಚಿನ್ ಹೆಜ್ಜೆಗುರುತುಗಳನ್ನು ಅನುಸರಿಸಿದ ಪುತ್ರ ಅರ್ಜುನ್

ಶುಕ್ರವಾರ, 31 ಅಕ್ಟೋಬರ್ 2014 (19:02 IST)
ಅರ್ಜುನ್ ತೆಂಡೂಲ್ಕರ್ ತನ್ನ ಪ್ರಸಿದ್ಧ ತಂದೆಯ ಹೆಜ್ಜೆಗುರುತುಗಳನ್ನು ಅನುಸರಿಸಿದ್ದಾನೆ. ಸಚಿನ್ 1988 ಮತ್ತು 1989ರಲ್ಲಿ ಸ್ಟಾರ್ ಕ್ರಿಕೆಟ್ ಕ್ಲಬ್ ಜೊತೆ ಎರಡು ಪ್ರವಾಸ ಹೋಗಿದ್ದು ಫಲಪ್ರದವಾಗಿ ತಮ್ಮ 16ನೇ ವಯಸ್ಸಿನಲ್ಲೇ ಭಾರತದ ತಂಡಕ್ಕೆ ಆಯ್ಕೆಯಾಗಿದ್ದರು.  ಈಗ ತೆಂಡೂಲ್ಕರ್ ಪುತ್ರ ದಕ್ಷಿಣ ಆಫ್ರಿಕಾಗೆ ವೋರ್ಲಿ ಕ್ರಿಕೆಟ್ ಕ್ಲಬ್‌ನೊಂದಿಗೆ 15 ದಿನಗಳ ಪ್ರವಾಸ ಹೊರಟಿದ್ದಾನೆ.

ಅರ್ಜುನ್ 16ರಿಂದ 18ರ ವಯೋಮಿತಿಯ ತಂಡಕ್ಕೆ ನಾಯಕನಾಗಿದ್ದಾನೆ. ವೋರ್ಲಿ ಸಿಸಿ ಮಾಲೀಕ ಅವಿನಾಶ್ ಕದಂ ಈ ಪ್ರವಾಸವನ್ನು ಆಯೋಜಿಸಿದ್ದರು. ವೋರ್ಲಿ ಸಿಸಿ ತಲಾ 45 ಓವರುಗಳ 10 ಪಂದ್ಯಗಳನ್ನು ಜೋಹಾನ್ಸ್‌ಬರ್ಗ್, ಪ್ರಿಟೋರಿಯಾ ಮತ್ತು ಪೊಚೆಫ್‌ಸ್ಟ್ರೂಮ್‌ನ ಅಗ್ರ ಶಾಲೆಗಳ ವಿರುದ್ಧ ಆಡಲಿದೆ. ಇಂತಹ ಪ್ರವಾಸಗಳು ಅತ್ಯಂತ ಮುಖ್ಯವಾಗಿದೆ. ಏಕೆಂದರೆ ಬಹುತೇಕ ಕ್ರಿಕೆಟಿಗರು ಮುಂಬೈನಲ್ಲಿ ಮಾತ್ರ ಆಡುತ್ತಾರೆ.ಅವರಿಗೆ ವಿವಿಧ ಪರಿಸ್ಥಿತಿಗಳಲ್ಲಿ ಆಡುವ ಅವಕಾಶವಿರುವುದಿಲ್ಲ.

ಇಂತಹ ಪ್ರವಾಸ ಯುವಕರಿಗೆ ಉತ್ತಮವಾಗಿ ಹೊಂದಿಕೊಳ್ಳಲು ನೆರವಾಗುತ್ತದೆ ಎಂದು ನುಡಿದಿದ್ದಾರೆ. ನಾವು ಕಳೆದ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾಗ ಅರ್ಜುನ್ ಉತ್ತಮವಾಗಿ ಆಡಿದ್ದ ಮತ್ತು ಅತ್ಯಧಿಕ ರನ್ ಸ್ಕೋರ್ ಮಾಡಿದ್ದ ಎಂದು ಕದಮ್ ಹೇಳಿದರು.  

ವೆಬ್ದುನಿಯಾವನ್ನು ಓದಿ