ಅಶ್ವಿನ್ ಸ್ಪಿನ್ ದಾಳಿಗೆ ಇಂಗ್ಲೆಂಡ್ 227 ರನ್‌ಗಳಿಗೆ ಆಲೌಟ್

ಶನಿವಾರ, 30 ಆಗಸ್ಟ್ 2014 (19:28 IST)
ಆರ್. ಅಶ್ವಿನ್ ಅವರ ಅಮೋಘ ಸ್ಪಿನ್ ಬೌಲಿಂಗ್ ನೆರವಿನಿಂದ ಭಾರತ ತಂಡ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕಿದ್ದು, 227 ರನ್‌ಗಳಿಗೆ ಆಲೌಟ್ ಮಾಡಿದೆ. ಇಂಗ್ಲೆಂಡ್ ಪರ ಕಾಕ್, ಅಲೆಕ್ಸ್ ಹೇಲ್ಸ್ ಮತ್ತು ಜಾಸ್ ಬಟ್ಲರ್ ಕ್ರಮವಾಗಿ 44, 42 ಮತ್ತು 42 ರನ್ ಗಳಿಸಿದರು. ಕಾಕ್ ರಾಯುಡು ಬೌಲಿಂಗ್‌ನಲ್ಲಿ ಔಟಾದರು. ಹೇಲ್ಸ್ ಸುರೇಶ್ ರೈನಾ ಬೌಲಿಂಗ್‌ನಲ್ಲಿ ಧೋನಿಗೆ ಕ್ಯಾಚಿತ್ತು ಔಟಾದರು.

ಅಶ್ವಿನ್ ತಮ್ಮ ಪರಿಣಾಮಕಾರಿ ಸ್ಪಿನ್ ನೆರವಿನಿಂದ ಇಯಾನ್ ಮೋರ್ಗನ್, ಬಟ್ಲರ್ ಮತ್ತು ಬೆನ್ ಸ್ಟೋಕ್ಸ್ ವಿಕೆಟ್ ಕಬಳಿಸಿದರು. ಅಶ್ವಿನ್ ಬೌಲಿಂಗ್‌ನಲ್ಲಿ ಮೋರ್ಗನ್ ಅವರು ಧೋನಿಗೆ ಕ್ಯಾಚಿತ್ತು ಔಟಾದರು. ಬಟ್ಲರ್ ಅಶ್ವಿನ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ವಿಕೆಟ್ ಒಪ್ಪಿಸಿದರು.

ಬೆನ್ ಸ್ಟೋಕ್ಸ್ ಅಶ್ವಿನ್ ಬೌಲಿಂಗ್‌ನಲ್ಲಿ ಸುರೇಶ್ ರೈನಾಗೆ ಕ್ಯಾಚಿತ್ತು ಔಟಾದರು. ಪ್ರಥಮ ಏಕದಿನ ಪಂದ್ಯದಲ್ಲಿ ರೈನಾ ಅಬ್ಬರದ ಬ್ಯಾಟಿಂಗ್‌ನಿಂದ ವಿಜಯಿಯಾಗಿರುವ ಭಾರತ ಈ ಪಂದ್ಯದಲ್ಲೂ ವಿಜಯದ ನಿರೀಕ್ಷೆಯಲ್ಲಿದ್ದು, ಅಜೇಯ ಮುನ್ನಡೆ ಸಾಧಿಸುವ ಆಶಯ ಹೊಂದಿದೆ. ಭಾರತ 8 ಓವರುಗಳಲ್ಲಿ ಶಿಖರ್ ಧವನ್ ವಿಕೆಟ್ ಕಳೆದುಕೊಂಡು 37 ರನ್ ಗಳಿಸಿದೆ. 

ವೆಬ್ದುನಿಯಾವನ್ನು ಓದಿ