ಎರಡನೇ ಟೆಸ್ಟ್‌ನಲ್ಲಿ ತಿರುಗೇಟು ನೀಡಲು ಆಸ್ಟ್ರೇಲಿಯಾ ನಿರ್ಧಾರ

ಬುಧವಾರ, 29 ಅಕ್ಟೋಬರ್ 2014 (18:21 IST)
ಏಷ್ಯನ್  ಸ್ಪಿನ್ ಪರೀಕ್ಷೆಯಲ್ಲಿ ಮತ್ತೊಮ್ಮೆ ವಿಫಲವಾದ ಬಳಿಕ ಆಸ್ಟ್ರೇಲಿಯಾ ಅಬು ದಾಬಿಯಲ್ಲಿ ಪಾಕಿಸ್ತಾನದ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ ತಿರುಗೇಟು ನೀಡಲು ನಿರ್ಧರಿಸಿದೆ. ಪಾಕಿಸ್ತಾನದ ಸ್ಪಿನ್ ದಾಳಿಗೆ ತತ್ತರಿಸಿದ ವಿಶ್ವ ನಂಬರ್ ಎರಡನೇ ತಂಡ ದುಬೈನಲ್ಲಿ ನಡೆದ ಪ್ರಥಮ ಟೆಸ್ಟ್‌ನಲ್ಲಿ 221 ರನ್ ಸೋಲನ್ನು ಅನುಭವಿಸಿದೆ.
 
 ಕಳೆದ ವರ್ಷ ಭಾರತದ ವಿರುದ್ಧ 4-0ಯಿಂದ ಧೂಳಿಪಟವಾಗಿದ್ದ ಆಸ್ಟ್ರೇಲಿಯಾ ಸ್ಪಿನ್ನರ್‌ಗಳ ವಿರುದ್ಧ ಇದು ಐದನೇ ಸತತ ಸೋಲಾಗಿದೆ. ಎಡಗೈ ಸ್ಪಿನ್ನರ್  ಜುಲ್ಫೀಕರ್ ಬಾಬರ್ ಒಟ್ಟು 7 ವಿಕೆಟ್ ಪಡೆದಿದ್ದರು. ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ಕೂಡ ಉತ್ತಮ ಪ್ರದರ್ಶನ ನೀಡಿದ್ದರು. ಯೂನುಸ್ ಖಾನ್ ಪ್ರತಿ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದರು.

ಎರಡನೇ ಟೆಸ್ಟ್‌ನಲ್ಲಿ ಕೂಡ ಪಾಕಿಸ್ತಾನ ಸ್ಪಿನ್ ಮೂಲಕ ಒತ್ತಡದ ತಂತ್ರ ಹೇರಲು ನಿರ್ಧರಿಸಿದ್ದು, 1994ರಲ್ಲಿ ಸ್ವದೇಶದಲ್ಲಿ ಗೆಲುವು ಗಳಿಸಿದ ನಂತರ ಪುನಃ ಸರಣಿ ಗೆಲ್ಲಲು ತುದಿಗಾಲಲ್ಲಿ ನಿಂತಿದೆ.  ಆಸ್ಟ್ರೇಲಿಯಾ ನಾಯಕ ಮೈಕೇಲ್  ಕ್ಲಾರ್ಕ್ ಈ ಬಾರಿ ಹೋರಾಟ ನೀಡುವ ಭರವಸೆ ನೀಡಿದ್ದಾರೆ. ನಾವು ಸೋತಾಗಲೆಲ್ಲ ಹೊಟ್ಟೆಯಲ್ಲಿ ಬೆಂಕಿಇಟ್ಟಂತಾಗುತ್ತದೆ. ಆಸ್ಟ್ರೇಲಿಯನ್ನರು ಸಾಮಾನ್ಯವಾಗಿ ಸೋಲನ್ನು ಇಷ್ಟಪಡುವುದಿಲ್ಲ ಎಂದು ಭಾನುವಾರ ಸೋಲಿನ ನಂತರ ಪ್ರತಿಕ್ರಿಯಿಸಿದರು. 

ವೆಬ್ದುನಿಯಾವನ್ನು ಓದಿ