ವಿಕೆಟ್ ಎಡಬದಿ ಸ್ಕ್ವೇರ್ ಶಾಟ್ ಹೊಡೆಯದಂತೆ ಕೊಹ್ಲಿಗೆ ಸಲಹೆ

ಗುರುವಾರ, 24 ಜುಲೈ 2014 (19:19 IST)
ಭಾರತದ ಬ್ಯಾಟಿಂಗ್ ಪ್ರತಿಭೆ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಇದುವರೆಗೆ ಆಡಿದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇಲವಲ 34 ರನ್ ಸ್ಕೋರ್ ಮಾಡಿ ನೀರಸ ಆಟ ಪ್ರದರ್ಶಿಸಿದ್ದಾರೆ. ಇನ್ನಿಂಗ್ಸ್‌ನಲ್ಲಿ ಅವರ ಅತ್ಯಧಿಕ ಸ್ಕೋರ್ 25 ರನ್‌ಗಳಾಗಿತ್ತು.

ವಿರಾಟ್ ಕೊಹ್ಲಿ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಕೊಹ್ಲಿಗೆ  ಸ್ವಿಂಗ್ ಬೌಲಿಂಗ್ ಎದುರಿಸುವಾಗ ವಿಕೆಟ್ ಎಡಬದಿ ಸ್ಕ್ವೇರ್  ಶಾಟ್‌ಗಳನ್ನು ಹೊಡೆಯದಂತೆ ಸಲಹೆ ಮಾಡಿದ್ದಾರೆ. ವಿರಾಟ್ 6 ಟೆಸ್ಟ್ ಶತಕಗಳನ್ನು ಬಾರಿಸಿದ್ದು,ವಿಕೆಟ್ ಎಡಬದಿ ಸ್ಕ್ವೇರ್ ಶಾಟ್‌ಗಳನ್ನು ಹೊಡೆಯದಂತೆ ಸಲಹೆ ಮಾಡಿರುವುದಾಗಿಯೂ 'V' ವ್ಯಾಪ್ತಿಯೊಳಗೆ ಆಡುವುದಕ್ಕೆ ಗಮನಹರಿಸಬೇಕು.

ಇದರಿಂದ ಸ್ವಿಂಗ್ ಮತ್ತು ವೇಗದ ಬೌಲಿಂಗ್ ಸುಲಭವಾಗಿ ಎದುರಿಸಬಹುದು ಎಂದು ಹೇಳಿದ್ದಾರೆ. ಚೆಂಡು ಸ್ವಿಂಗ್ ಆಗುತ್ತಿರಬೇಕಾದರೆ ಫ್ಲಿಕ್ ಶಾಟ್‌ಗಳನ್ನು ತಪ್ಪಿಸಬೇಕೆಂದು ಕೊಹ್ಲಿಗೆ ತಿಳಿಸಿದ್ದಾಗಿ ಹೇಳಿದರು. 

ವೆಬ್ದುನಿಯಾವನ್ನು ಓದಿ