ಭಾರತದ ಆಟಗಾರರ ಗೆಳತಿಯರಿಗೆ ಕೊಕ್ ನೀಡಿದ ಬಿಸಿಸಿಐ

ಗುರುವಾರ, 21 ಆಗಸ್ಟ್ 2014 (20:01 IST)
ಇಂಗ್ಲೆಂಡ್‌ನಲ್ಲಿ ಭಾರತ ತಂಡದ 3-1ರ ಹೀನಾಯ ಸೋಲು ಬಿಸಿಸಿಐಯನ್ನು ಕಂಗೆಡಿಸಿದೆ. ಇಂತಹ ಪರಿಸ್ಥಿತಿಯನ್ನು ಸರಿದಾರಿಗೆ ತರಲು ಭಾರತದ ಕ್ರಿಕೆಟ್ ಮಂಡಳಿ ಕೋಚ್ ಡಂಕನ್ ಫ್ಲೆಚರ್ ರೆಕ್ಕೆಗಳನ್ನು ಕತ್ತರಿಸಿ, ರವಿ ಶಾಸ್ತ್ರಿ ಅವರನ್ನು ಏಕದಿನ ಪಂದ್ಯಗಳ ನಿರ್ದೇಶಕರಾಗಿ ಮಾಡಿದ್ದಾರೆ. ಇದೆಲ್ಲ ಮುಗಿದ ಮೇಲೆ ಬಿಸಿಸಿಐ ಈಗ ಆಟಗಾರರ ನಡವಳಿಕೆ ಮೇಲೆ ಕಣ್ಣಿರಿಸಿದೆ. 
 
 ಭಾರತದ ಪತನಕ್ಕೆ ಆಟಗಾರರ ಪತ್ನಿಯರು ಮತ್ತು ಗೆಳತಿಯರು ಕೂಡ ಕಾರಣವಾಗಿದ್ದಾರೆ  ಎಂದು ಬಿಸಿಸಿಐ ಭಾವಿಸಿದೆ. ಆದ್ದರಿಂದ ಆಟಗಾರರ ಗೆಳತಿಯರು ಪ್ರವಾಸದಲ್ಲಿ ಅವರ ಜೊತೆಗೂಡಬಾರದು ಮತ್ತು ಪತ್ನಿಯರು ತಂಗುವ ಅವಧಿಗೆ ಕೂಡ ನಿರ್ಬಂಧ ವಿಧಿಸಲು ನಿರ್ಧರಿಸಿದೆ.
 
 ವಿರಾಟ್ ಕೊಹ್ಲಿ ತನ್ನ ಗೆಳತಿ, ನಟಿ ಅನುಷ್ಕಾ ಶರ್ಮಾಳನ್ನು ಪ್ರವಾಸಕ್ಕೆ ಜೊತೆಗೂಡಿದ್ದರಿಂದ ಉದ್ಭವಿಸಿದ ಫಲಿತಾಂಶ ಇದಕ್ಕೆ ಕಾರಣವಿರಬಹುದು. ಸರಣಿಯಲ್ಲಿ ಕಳಪೆ ಪ್ರದರ್ಶನಕ್ಕಾಗಿ ಟೀಕಾಪ್ರವಾಹಕ್ಕೆ ತುತ್ತಾದ ಕೊಹ್ಲಿ ಅವರಿಗೆ ಅನುಷ್ಕಾರನ್ನು ಜೊತೆಗೂಡುವಂತೆ ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ಅನುಮತಿ ನೀಡಿದ್ದರು. 
 ವಿರಾಟ್ ಕೊಹ್ಲಿ ಅವರ ಇಂಗ್ಲೆಂಡ್ ಬ್ಯಾಟಿಂಗ್ ಸರಾಸರಿ ಸಂಪೂರ್ಣ ಕಥೆಯನ್ನು ಹೇಳುತ್ತದೆ.

10 ಇನ್ನಿಂಗ್ಸ್‌ಗಳಲ್ಲಿ ವಿರಾಟ್ 13ರ ಸರಾಸರಿಯಲ್ಲಿ 134 ರನ್ ಹೊಡೆದಿದ್ದಾರೆ. ಇಂಗ್ಲೆಂಡ್ ಪ್ರವಾಸ ಪ್ರತಿಯೊಬ್ಬರಿಗೂ ಕಣ್ಣು ತೆರೆಸಿದೆ. ಆಟಗಾರರು ತಮ್ಮ ಆಟದ ಮೇಲೆ ಗಮನ ಕೇಂದ್ರೀಕರಿಸಲು ಬಯಸಿದ್ದರೆ, ಅವರ ಪತ್ನಿಯರು ದೊಡ್ಡ ಭಂಗವಾಗಿರುತ್ತಾರೆ. ಕೆಲವು ಆಟಗಾರರು ಜಿಮ್ ಅಥವಾ ನೆಟ್‌ಗೆ ಹೋಗಲು ಬಯಸಿದ್ದರೆ, ಪತ್ನಿಯರಿಗೆ ನಗರ ವೀಕ್ಷಣೆಯ ಬಯಕೆಯಿರುತ್ತದೆ. ಆದ್ದರಿಂದ ಪತ್ನಿಯರು ಆಟಗಾರರ ಜೊತೆ ಕಳೆಯುವ ದಿನಗಳಿಗೆ ಕತ್ತರಿ ಹಾಕಲು ನಾವು ಯೋಜಿಸಿದ್ದೇವೆ ಎಂದು ಅಧಿಕಾರಿ ಹೇಳಿದರು. 

ವೆಬ್ದುನಿಯಾವನ್ನು ಓದಿ