ನಷ್ಟ ಪಾವತಿಸಿ, ಇಲ್ಲಾಂದ್ರೆ ಕಾನೂನು ಹೋರಾಟ ಎದುರಿಸಿ: ವಿಂಡೀಸ್‌ ಬೋರ್ಡ್‌ಗೆ ಬಿಸಿಸಿಐ ಎಚ್ಚರಿಕೆ

ಶನಿವಾರ, 24 ಜನವರಿ 2015 (15:51 IST)
ಕಳೆದ ವರ್ಷ ಸರಣಿಯನ್ನು ರದ್ದುಗೊಳಿಸಿ 41.97 ಮಿಲಿಯನ್ ಡಾಲರ್‌ಗಳಷ್ಟು ನಷ್ಟ ಉಂಟು ಮಾಡಿದ್ದ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧ ಬಿಸಿಸಿಐ ಕೂಡಲೇ ನಷ್ಟವನ್ನು ಭರಿಸುವಂತೆ ಒತ್ತಾಯಿಸಿದೆ. 
 
ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ದವೆ ಕ್ಯಾಮರೂನ್ ಮತ್ತು ಕಾರ್ಯದರ್ಶಿ ಇರ್ವಿನ್ ಲಾ ರೊಖ್ ಅವರಿಗೆ ಪತ್ರವೊಂದನ್ನು ಬರೆದ ಬಿಸಿಸಿಐ, ಕೂಡಲೇ ನಷ್ಟವನ್ನು ಭರಿಸಿ ಇಲ್ಲವಾದಲ್ಲಿ ಕಾನೂನಿನ ಮೊರೆಹೋಗಲಾಗುವುದು ಎಂದು ಎಚ್ಚರಿಕೆಯ ಸಂದೇಶ ರವಾನಿಸಿದೆ.
 
ವಾರದೊಳಗಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಪತ್ರಕ್ಕೆ ಪ್ರತ್ಯುತ್ತರ ನೀಡದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಸಿಸಿಐ ಮಂಡಳಿ ಸ್ಪಷ್ಟಪಡಿಸಿದೆ.
 
ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಹಣ ಪಾವತಿಗೆ 40 ದಿನಗಳ ಕಾಲವಕಾಶ ನೀಡಬೇಕು ಎಂದು ಬಿಸಿಸಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಬಿಸಿಸಿಐ ಮೌನವಾಗಿತ್ತು. ಆದರೆ, ಹಲವು ತಿಂಗಳುಗಳು ಕಳೆದರು ಯಾವುದೇ ಪ್ರತಿಕ್ರಿಯೆ ಬಾರದಿದ್ದರಿಂದ ಬಿಸಿಸಿಐ ಇದೀಗ ಕಾನೂನು ಕ್ರಮಕ್ಕೆ ಮುಂದಾಗಿದೆ.
 

ವೆಬ್ದುನಿಯಾವನ್ನು ಓದಿ