ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಕಳಪೆ ಪ್ರದರ್ಶನ: ಬೌಲರ್‌ಗಳಿಗೆ ಗವಾಸ್ಕರ್ ತರಾಟೆ

ಬುಧವಾರ, 21 ಜನವರಿ 2015 (16:45 IST)
ಆಸ್ಟ್ರೇಲಿಯಾದ ಪಿಚ್ ಪರಿಸ್ಥಿತಿಯಲ್ಲಿ ಕಳಪೆ ಪ್ರದರ್ಶನ ತೋರಿದ ಭಾರತದ ಬೌಲರುಗಳನ್ನು ಮಾಜಿ ನಾಯಕ ಸುನಿಲ್ ಗವಾಸ್ಕರ್ ತರಾಟೆಗೆ ತೆಗೆದುಕೊಂಡಿದ್ದಾರೆ. ವಿದೇಶಿ ಪ್ರವಾಸಗಳಲ್ಲಿ ಹಿಂದಿನ ಅನುಭವಗಳಿಂದ ಬೌಲರುಗಳು ಪಾಠ ಕಲಿತಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.

ಆಸ್ಟ್ರೇಲಿಯಾದ ವಿರುದ್ಧ 2-0 ಟೆಸ್ಟ್ ಸರಣಿ ಸೋಲಿನಲ್ಲಿ 20 ವಿಕೆಟ್ ಪಡೆಯಲು ಭಾರತ ವಿಫಲವಾದ ನಂತರ, ಆತಿಥೇಯರ ವಿರುದ್ದ ತ್ರಿಕೋನ ಸರಣಿಯಲ್ಲಿ ಕೂಡ 267 ರನ್ ಸ್ಕೋರನ್ನು ರಕ್ಷಿಸಿಕೊಳ್ಳುವಲ್ಲಿ ಭಾರತ ವಿಫಲವಾದ ಬಗ್ಗೆ ಗವಾಸ್ಕರ್ ಅತೃಪ್ತಿ ವ್ಯಕ್ತಪಡಿಸಿದರು. ಸೀಮಿತ ಓವರುಗಳ ಪಂದ್ಯದಲ್ಲಿ ಭಾರತದ ಬೌಲರುಗಳು ವಿದೇಶಿ ಅನುಭವಗಳಿಂದ ಪಾಠ ಕಲಿತಂತೆ ಕಾಣುತ್ತಿಲ್ಲ ಎಂದು ಹೇಳಿದರು.

ಆದರೆ ಆಶಾವಾದಿಯಾಗಿ ಮಾತನಾಡಿದ ಗವಾಸ್ಕರ್, ಧೋನಿ ಮತ್ತು ಪಾಳೆಯ ಇಂಗ್ಲೆಂಡ್ ಸಾಧನೆಯಿಂದ ಸ್ಫೂರ್ತಿ ಪಡೆದು ಅದೇ ಲಯವನ್ನು ಕಂಡುಕೊಂಡರೆ, ಭಾರತ ಸದೃಢ ತಂಡವಾಗುತ್ತದೆ ಎಂದು ಕ್ರಿಕೆಟರ್ ಮತ್ತು ವಿಶ್ಲೇಷಕ ಗವಾಸ್ಕರ್ ಹೇಳಿದರು.

ಗವಾಸ್ಕರ್ ಭುವನೇಶ್ವರ್ ಕುಮಾರ್ ಮತ್ತು ಮಹಮ್ಮದ್ ಶಮಿ ಮೇಲೆ ಭರವಸೆ ವ್ಯಕ್ತಪಡಿಸಿದರು.  ಫೀಲ್ಡಿಂಗ್ ಅಗತ್ಯದ ಬಗ್ಗೆ ಕೂಡ ಗವಾಸ್ಕರ್ ಒತ್ತಿ ಹೇಳಿದರು. ವಿಶ್ವಕಪ್‌ಗೆ 15 ಜನರನ್ನು ಹೆಸರಿಸುವಾಗ, ಇಶಾಂತ್ ಶರ್ಮಾ ಬದಲಿಗೆ ಮೋಹಿತ್ ಶರ್ಮಾರನ್ನು ನಾನು ಆಯ್ಕೆ ಮಾಡಿದ್ದೆ. ಏಕೆಂದರೆ ಮೋಹಿತ್ ಉತ್ತಮ ಫೀಲ್ಡರ್ ಎಂದು ಹೇಳಿದರು. 

ವೆಬ್ದುನಿಯಾವನ್ನು ಓದಿ