ಚೆನ್ನೈಗೆ ಸೋಲಿನ ಕಹಿ ಉಣಿಸಿದ ಕೆಕೆಆರ್

ಗುರುವಾರ, 18 ಸೆಪ್ಟಂಬರ್ 2014 (19:30 IST)
ಹೈದರಾಬಾದ್‌ನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತ್ತಾ ಮತ್ತು ಚೆನ್ನೈ ನಡುವಿನ ಚಾಂಪಿಯನ್ಸ್ ಲೀಗ್ ಟಿ ಟ್ವಿಂಟಿ ಟ್ರೋಫಿ ಪಂದ್ಯದಲ್ಲಿ ಕೋಲ್ಕತ್ತಾ ಮೂರು ವಿಕೆಟ್‌ಗಳಿಂದ ರೋಚಕ ಜಯ ಸಾಧಿಸಿ ಚೆನ್ನೈ ತಂಡಕ್ಕೆ ಸೋಲಿನ ಕಹಿ ಉಣಿಸಿದೆ. ಕೋಲ್ಕತ್ತಾ ಟಾಸ್ ಜಯಿಸಿ ಫೀಲ್ಡಿಂಗ್ ತೆಗೆದುಕೊಂಡಿತು. ಚೆನ್ನೈ ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡರೂ ಧೋನಿ ಮತ್ತು ಬ್ರಾವೋ ಉತ್ತಮ ಜೊತೆಯಾಟವಾಡಿದರು.

ಧೋನಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ 20 ಎಸೆತಗಳಲ್ಲಿ 35 ರನ್ ಗಳಿಸಿದರೆ, ಬ್ರಾವೋ 28 ಎಸೆತಗಳಲ್ಲಿ 28 ರನ್ ಗಳಿಸಿದರು. ಚೆನ್ನೈ ಸ್ಕೋರು 20 ಓವರುಗಳಲ್ಲಿ 157ಕ್ಕೆ 4 ವಿಕೆಟ್ ಕಳೆದುಕೊಂಡು ಕೋಲ್ಕತ್ತಾಗೆ 158ರನ್‌ಗಳ ಗೆಲುವಿನ ಗುರಿಯನ್ನು ಹಾಕಿತ್ತು.  ಕೋಲ್ಕತ್ತಾ ಪರ ಬಿಸ್ಲಾ, ಗಂಭೀರ್, ಮನೀಷ್ ಪಾಂಡೆ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸೋಲಿನ ಸ್ಥಿತಿಯಲ್ಲಿತ್ತು. ಆದರೆ ಡೋಚಾಟ್ ಮತ್ತು ಆಂಡ್ರೆ ರಸೆಲ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತಾ ಚೇತರಿಸಿಕೊಂಡಿತು.

 ಒಂದು ಹಂತದಲ್ಲಿ 5 ವಿಕೆಟ್ ಕಳೆದುಕೊಂಡು 51 ರನ್ ಗಳಿಸಿ ಸಂಕಷ್ಟದ ಸ್ಥಿತಿಯಲ್ಲಿದ್ದ ಕೋಲ್ಕತ್ತಾ ಪರ ಆಂಡ್ರೆ ರಸ್ಸೆಲ್ 25 ಎಸೆತಗಳನ್ನು ಎದುರಿಸಿ 58 ರನ್ ಬಾರಿಸಿದರು. ರಸ್ಸೆಲ್ ಮತ್ತು ಡೋಶಾಟ್ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಇನ್ನೂ 6 ಎಸೆತಗಳು ಬಾಕಿವುಳಿದಿರುವಾಗಲೇ ಕೆಕೆಆರ್ ಗೆಲುವಿನ ಗುರಿಯನ್ನು ಮುಟ್ಟಿತು. 

ವೆಬ್ದುನಿಯಾವನ್ನು ಓದಿ